‘ಸ್ಪೆಲ್ಲಿಂಗ್ ಬೀ’ ಚಾಂಪಿಯನ್ ಆದ ಭಾರತ ಮೂಲದ ಕಾರ್ತಿಕ್..!

Indian-American Karthik Nemmani become Scripps National Spelling Bee champion
Highlights

ಭಾರತೀಯ ಮೂಲದ ಅಮೆರಿಕನ್  ಬಾಲಕ ಕಾರ್ತಿಕ್ ನೆಮ್ಮನಿ, 2018ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಕಯೋನಿಯಾ (Koinonia)ಎನ್ನುವ ಪದದ ಸ್ಪೆಲ್ಲಿಂಗ್ ನ್ನು ಸರಿಯಾಗಿ ಉಚ್ಚರಿಸುವ ಮೂಲಕ ಇವರು ಜಯ ಸಾಧಿಸಿದ್ದಾರೆ.  93 ವರ್ಷಗಳ ಇತಿಹಾಸದಲ್ಲಿ ಈ ಸಾಲಿನಲ್ಲಿ ಅತ್ಯಂತ ಕಠಿಣವಾದ ಸ್ಪರ್ಧೆ ಇತ್ತೆಂದು ಹೇಳಲಾಗಿದೆ.

ಹೋಸ್ಟನ್(ಜೂ.1): ಭಾರತೀಯ ಮೂಲದ ಅಮೆರಿಕನ್  ಬಾಲಕ ಕಾರ್ತಿಕ್ ನೆಮ್ಮನಿ, 2018ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಕಯೋನಿಯಾ (Koinonia)ಎನ್ನುವ ಪದದ ಸ್ಪೆಲ್ಲಿಂಗ್ ನ್ನು ಸರಿಯಾಗಿ ಉಚ್ಚರಿಸುವ ಮೂಲಕ ಇವರು ಜಯ ಸಾಧಿಸಿದ್ದಾರೆ. 93 ವರ್ಷಗಳ ಇತಿಹಾಸದಲ್ಲಿ ಈ ಸಾಲಿನಲ್ಲಿ ಅತ್ಯಂತ ಕಠಿಣವಾದ ಸ್ಪರ್ಧೆ ಇತ್ತೆಂದು ಹೇಳಲಾಗಿದೆ. 

ಅಮೆರಿಕಾದ ಟೆಕ್ಸಾಸ್ ನ ಕಿನ್ನೆ ನಗರದ ನಿವಾಸಿಯಾದ ಕಾರ್ತಿಕ್, ಒಟ್ಟು 515 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸಿದ್ದಾರೆ. ಕಳೆದ ವರ್ಷ ಒಟ್ಟಾರೆ 291 ಸ್ಪರ್ಧಿಗಳನ್ನು ಕಂಡಿದ್ದ ಈ ಸ್ಪರ್ಧೆಯಲ್ಲಿ ಈ ಬಾರಿ ದುಪ್ಪಟ್ಟು ಸ್ಪರ್ಧಿಗಳು ಭಾಗವಹಿಸಿದ್ದರು.

ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 16 ಸ್ಪರ್ದಿಗಳಿದ್ದರು. ಇದರಲ್ಲಿ 9 ಬಾಲಕಿಯರು, 7 ಬಾಲಕರಿದ್ದು ಎಲ್ಲರೂ 11ರಿಂದ 14 ವರ್ಷದವರಾಗಿದ್ದರು. ಅಂತಿಮವಾಗಿ ಕಾರ್ತಿಕ್ ಹಾಗೂ ಟೆಕ್ಸಾಸ್ ನ 12ರ ನಾಲಕಿ ನಯ್ಸಾ ಮೋದಿ ಉಳಿದುಕೊಂಡಿದ್ದರು. ಇದರಲ್ಲಿ ಕಾರ್ತಿಕ್ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ನಯ್ಸಾ ಇದು ನಾಲ್ಕನೇ ಬಾರಿಗೆ ಕಣದಲ್ಲಿದ್ದರು.

loader