ಇಂದು 5ರಿಂದ 8ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ 7ನೇ ನಿಮಿಷದಲ್ಲೇ ಕನಾ ನೊಮುರಾ ತಂಡದ ಪರ ಮೊದಲ ಗೋಲು ಗಳಿಸಿದರು. ಮತ್ತೊಬ್ಬ ಆಟಗಾರ್ತಿ ನಾಹೊ ಇಚಿಟಾನಿ 29ನೇ ನಿಮಿಷದಲ್ಲಿ ಗೋಲುಗಳಿಸಿ ತಂಡವನ್ನು 2-0 ರಿಂದ ಮುನ್ನಡೆಗೊಳಿಸಲು ಯಶ್ವಸಿಯಾದರು.
ಜೋಹನ್ಸ್'ಬರ್ಗ್(ಜು.20): ವಿಶ್ವ ಹಾಕಿ ಲೀಗ್'ನಲ್ಲಿ ಜಪಾನ್ ವಿರುದ್ಧ ಭಾರತ ವನಿತೆಯರ ಹಾಕಿ 0-2 ಗೋಲುಗಳಿಂದ ಸೋಲುವುದರೊಂದಿಗೆ 2018ರ ವಿಶ್ವಕಪ್'ನಲ್ಲಿ ಅರ್ಹತೆ ಪಡೆಯುವ ಆಸೆ ಕಮರಿದೆ. ಗೋಲ್ ಕೀಪರ್ ಸವಿತಾ ಅವರು ಉತ್ತಮ ಪ್ರದರ್ಶನ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇಂದು 5ರಿಂದ 8ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ 7ನೇ ನಿಮಿಷದಲ್ಲೇ ಕನಾ ನೊಮುರಾ ತಂಡದ ಪರ ಮೊದಲ ಗೋಲು ಗಳಿಸಿದರು. ಮತ್ತೊಬ್ಬ ಆಟಗಾರ್ತಿ ನಾಹೊ ಇಚಿಟಾನಿ 29ನೇ ನಿಮಿಷದಲ್ಲಿ ಗೋಲುಗಳಿಸಿ ತಂಡವನ್ನು 2-0 ರಿಂದ ಮುನ್ನಡೆಗೊಳಿಸಲು ಯಶ್ವಸಿಯಾದರು. ಭಾರತದ ವನಿತೆಯರು ಎಷ್ಟೆ ಆಕ್ರಮಣಕಾರಿ ಆಟವಾಡುದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
