Asianet Suvarna News Asianet Suvarna News

ಬನ್ನಿ ಅಂತಾ ಮೋದಿ ಕರಿತವ್ರೆ: ನೋಡ್ತಿನಿ ಅಂತಾ ಟ್ರಂಪ್ ಅಂತವ್ರೆ!

ಟ್ರಂಪ್ ಗಣರಾಜ್ಯೋತ್ಸವಕ್ಕೆ ಬರುವುದು ಅನುಮಾನ! ಮುಖ್ಯ ಅತಿಥಿಯಾಗಿ ಆಹ್ವಾನ ನೀಡಿದ್ದ ಭಾರತ! 2019 ರ ಗಣರಾಜ್ಯೋತ್ಸವಕ್ಕೆ ಯಾರು ಮುಖ್ಯ ಅತಿಥಿ? ಟ್ರಂಪ್ ಆಗಮನ ಪರಿಶೀಲನೆಯಲ್ಲಿದೆ ಎಂದ ಭಾರತ! ಟ್ರಂಪ್ ಭಾರತ ಭೇಟಿ ಅನುಮಾನ ಎಂದ ಅಮೆರಿಕ

India US in touch over invite to Donald Trump Sources
Author
Bengaluru, First Published Aug 10, 2018, 11:06 AM IST

ವಾಷಿಂಗ್ಟನ್(ಆ.10): 2019 ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಭಾರತ ಆಹ್ವಾನ ನೀಡಿದ್ದು, ಅವರ ಆಗಮನದ ವಿಷಯ ಪರಿಶೀಲನೆಯಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಈ ಕುರಿತು ಭಾರತ ಮತ್ತು ಅಮೆರಿಕ ಸರ್ಕಾರಗಳು ಸಂಪರ್ಕದಲ್ಲಿದ್ದು, ಅಮೆರಿಕ ಅಧ್ಯಕ್ಷರ ಭೇಟಿಯ ದಿನಾಂಕ, ಸಮಯ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿದುಬಂದಿದೆ.

ಟ್ರಂಪ್ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬರುವ ಯಾವುದೇ ನಿರೀಕ್ಷೆ ಭಾರತ ಸರ್ಕಾರದ ಮುಂದೆ ಇಲ್ಲ. ಬೇರೆ ಹಲವು ಆಯ್ಕೆಗಳನ್ನು ಭಾರತ ನೋಡುತ್ತಿದೆ. ಅಲ್ಲದೇ ಟ್ರಂಪ್ ಕೂಡ ಭಾರತಕ್ಕೆ ಭೇಟಿ ನೀಡುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸರಹ ಸಂದರ್ಸ್ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಡೊನಾಲ್ಡ್ ಟ್ರಂಪ್ ಅವರನ್ನು ದ್ವಿಪಕ್ಷೀಯ ಮಾತುಕತೆ ನಡೆಸಲು ಭಾರತಕ್ಕೆ ಆಹ್ವಾನಿಸಿದ್ದರು. ಟ್ರಂಪ್ ಅವರು ಭಾರತದ ಆಹ್ವಾನವನ್ನು ಸ್ವೀಕರಿಸಿದರೆ ಎರಡೂ ದೇಶಗಳ ಮಧ್ಯೆ ರಕ್ಷಣೆ, ಭದ್ರತೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಕಾರ್ಯತಂತ್ರ ಸಹಭಾಗಿತ್ವಕ್ಕೆ ಉತ್ತಮ ಬಲವರ್ಧನೆ ಸಿಗಲಿದೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾದ ಮೇಲೆ ಅಮೆರಿಕಾ ಭಾರತದೊಂದಿಗೆ ಆಳವಾದ ಕಾರ್ಯತಂತ್ರ ಸಹಕಾರಕ್ಕೆ ಒತ್ತು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಭಾರತ ಟ್ರಂಪ್ ಅವರ ಬರುವಿಕೆ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದೆ. 2015ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios