ಇಂಜೀನ್ ರಹಿತ ರೈಲು ಓಡಲು ಸಿದ್ಧ | ಈ ಅತ್ಯಾಧುನಿಕ ರೈಲಿಗೆ ಟ್ರೈನ್ 18 ಎಂದು ಹೆಸರಿಡಲಾಗಿದೆ | ಏನಿದರ ವಿಶೇಷ? 

ಚೆನ್ನೈ (ಅ. 24): ನೋಡಲು ಬುಲೆಟ್ ರೈಲಿನಂತೆಯೇ ಇರುವ, ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸ ಮತ್ತು ಉತ್ಪಾದನೆ ಮಾಡಲಾಗಿರುವ ಇಂಜಿನ್‌ರಹಿತ ರೈಲು ಪರೀಕ್ಷಾರ್ಥ ಓಡಾಟಕ್ಕೆ ಸಿದ್ಧವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 100 ಕೋಟಿ ರು. ವೆಚ್ಚದಲ್ಲಿ ವಿನ್ಯಾಸಗೊಳಿಸಿ ತಯಾರಿಸಲಾಗಿರುವ ಈ ಅತ್ಯಾಧುನಿಕ ರೈಲಿಗೆ ಟ್ರೈನ್ 18 ಎಂದು ಹೆಸರಿಡಲಾಗಿದೆ. 16 ಕೋಚ್ಗಳನ್ನು ಹೊಂದಿದ ಟ್ರೈನ್-18 ರೈಲು, ದೆಹಲಿ-ಭೋಪಾಲ್, ಚೆನ್ನೈ-ಬೆಂಗಳೂರು ಮತ್ತು ಮುಂಬೈ-ಅಹಮದಾಬಾದ್ ನಗರಗಳಿಗೆ ಚಲಿಸಲಿದ್ದು, ಶತಾಬ್ದಿ ಎಕ್ಸ್ಪ್ರೆಸ್ ರೈಲಿಗಿಂತಲೂ ಶೇ.10-15 ರಷ್ಟು ವೇಗವಾಗಿ ಚಲಿಸಲಿದೆ.