ಭಾರತವು 1990ರಿಂದ 2015ರ ಅವಧಿಯಲ್ಲಿ ಶೇ.46ರಷ್ಟು ಮಾನವ ಅಭಿವೃದ್ಧಿ ಸಾಧಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ನವದೆಹಲಿ(ಮಾ.22): ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ 131ನೇ ಸ್ಥಾನ ಪಡೆದಿದೆ. ಭಾರತವು ‘ಮಧ್ಯಮ ಮಾನವ ಅಭಿವೃದ್ಧಿ’ ಸಾಧಿಸಿದೆ ಎಂದು ಸೂಚ್ಯಂಕ ಬಣ್ಣಿಸಿದೆ.

2016ನೇ ಸಾಲಿನಲ್ಲಿ 189 ದೇಶಗಳ ಸಮೀಕ್ಷೆ ನಡೆಸಿ ಸೂಚ್ಯಂಕ ಸಿದ್ಧಪಡಿಸಲಾಗಿದೆ. ಇದರಲ್ಲಿ ಇತರ ಕೆಲ ಸಾರ್ಕ್ ದೇಶಗಳಿಗಿಂತ ಭಾರತ ಮುನ್ನಡೆ ಸಾಧಿಸಿದೆ. ಭೂತಾನ್ (132), ಬಾಂಗ್ಲಾದೇಶ (139), ಪಾಕಿಸ್ತಾನ (147), ಆಫ್ಘಾನಿಸ್ತಾನ (169)ನೇ ಸ್ಥಾನ ಪಡೆದಿವೆ. ಆದರೆ ಭಾರತಕ್ಕಿಂತ ಶ್ರೀಲಂಕಾ (73) ಹಾಗೂ ಮಾಲ್ಡೀವ್ಸ್ (105) ಉತ್ತಮ ಶ್ರೇಯಾಂಕ ಪಡೆದಿದ್ದು, ‘ಅತ್ಯುನ್ನತ ಮಾನವ ಅಭಿವೃದ್ಧಿ’ ಸಾಧಿಸಿದ ದರ್ಜೆಯಲ್ಲಿ ಸೇರಿಕೊಂಡಿವೆ. ಚೀನಾ 90ನೇ ಸ್ಥಾನದಲ್ಲಿದೆ.

ಭಾರತವು 1990ರಿಂದ 2015ರ ಅವಧಿಯಲ್ಲಿ ಶೇ.46ರಷ್ಟು ಮಾನವ ಅಭಿವೃದ್ಧಿ ಸಾಧಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇದೇ ವೇಳೆ ನಾರ್ವೆ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್, ಜರ್ಮನಿ ಮತ್ತು ಡೆನ್ಮಾರ್ಕ್ ಮೊದಲ 5 ಸ್ಥಾನ ಪಡೆದಿವೆ.

ಬುರುಂಡಿ, ಬುರ್ಕಿನಾ ಫಾಸೋ, ಛಾದ್, ನೈಜೆರ್ ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (ಎಲ್ಲವೂ ಆಫ್ರಿಕಾ ದೇಶಗಳು) ಕೊನೆಯ 5 ಸ್ಥಾನ ಪಡೆದಿವೆ.