ನವದೆಹಲಿ (ನ.21): ಅಂತರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿ ಭಾರತೀಯ ಮೂಲದ ದಲ್ವೀರ್ ಭಂಡಾರಿ ಎರಡನೇ ಬಾರಿ ಚುನಾಯಿತರಾಗಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 193 ಮತಗಳಲ್ಲಿ 183 ಮತಗಳನ್ನು ಗೆದ್ದಿದ್ದಾರೆ. ನಿನ್ನೆ ನ್ಯೂಯಾರ್ಕ್'ನಲ್ಲಿ ನಡೆದ 11 ನೇ ಸುತ್ತಿನ ಮತದಾನದಲ್ಲಿ ಭಾರತ ಮೂಲದ ದಲ್ವೀರ್ ಭಂಡಾರಿ ಗೆಲುವನ್ನು ಸಾಧಿಸಿದ್ದಾರೆ. ಬ್ರಿಟನ್ ತಮ್ಮ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್'ವುಡ್'ರನ್ನು ಹಿಂದಕ್ಕೆ ತೆಗೆದುಕೊಂಡಿತ್ತು.

71 ವರ್ಷಗಳ ಅಂತರಾಷ್ಟ್ರೀಯ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ಐಸಿಜೆಯಲ್ಲಿ ತಮ್ಮ ದೇಶದ ನ್ಯಾಯಾಧೀಶರನ್ನು ಹೊಂದಿಲ್ಲದಂತಾಗಿದೆ.

2012, ಜೂ. 19 ರಂದು ದಲ್ವೀರ್ ಭಂಡಾರಿ ಮೊದಲ ಬಾರಿ ಐಸಿಜೆ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ದಲ್ವೀರ್ ಭಂಡಾರಿ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿನಂದಿಸಿದ್ದಾರೆ.