ಪ್ರಶ್ನೆ ಎತ್ತಿದ ಉಪೇಂದ್ರ ಟ್ವೀಟ್/ ಹೈದರಾಬಾದ್ ಅತ್ಯಾಚಾರ ಪ್ರಕರಣ/ ಪ್ರಭಾವಿಗಳ ವಿಚಾರದಲ್ಲಿ ಯಾಕೆ ಎನ್ ಕೌಂಟರ್ ಆಗಲ್ಲ/ ಎಲ್ಲ ಪ್ರಕರಣಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದೆ?

ಬೆಂಗಳೂರು(ಡಿ. 06) ಹೈದರಾಬಾದ್ ರೇಪ್ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವ ಬಗ್ಗೆ ಪರ-ವಿರೋಧದ ಅಲೆ ಎದ್ದಿರುವಾಗಲೇ ರಿಯಲ್ ಸ್ಟಾರ್ ಉಪೇಂದ್ರ ಮಾಡಿರುವ ಟ್ವೀಟ್ ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟುಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ ? ಈ ರೀತಿಯ ಎನ್ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸ್ನಲ್ಲಿ ಯಾಕಾಗುವುದಿಲ್ಲ? ಕೋರ್ಟ್ ನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ ?

ಈ ರೀತಿಯಾಗಿ ಉಪೇಂದ್ರ ಪ್ರಶ್ನೆ ಮಾಡಿದ್ದಾರೆ. ಅವರ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾ ತನಗೆ ಬೇಕಾದಂತೆ ವಿಶ್ಲೇಷಣೆ ಮಾಡಿದೆ.

ನಮ್ಮ ಜಮೀನಿನಲ್ಲಿ ಆ ರಕ್ಕಸರ ಸುಡಬೇಡಿ!

ಅತ್ಯಾಚಾರಿಗಳ ಪರವಾಗಿ ಉಪ್ಪಿ ಕಣ್ಣೀರು ಹಾಕಿದ್ದಾರೆ ಎಂಬ ಪ್ರತಿಕ್ರಿಯೆಯೂ ಬಂದಿದೆ. ಆದರೆ ನಿಜಕ್ಕೂ ಅವರು ಹೇಳಿದ್ದು ಏನು ಎಂಬ ಸರಿಯಾದ ವಿಶ್ಲೇಷಣೆ ಆಗಿಲ್ಲ.

ಒಂದು ಕಡೆ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತೇನೆ ಎಂದು ಹೇಳಿದೆ. ಪ್ರಮುಖ ಅಥವಾ ಪ್ರಭಾವಶಾಲಿ ವ್ಯಕ್ತಿಗಳು ಇಂಥ ಪ್ರಕರಣದಲ್ಲಿ ಸಿಲುಕಿಕೊಂಡಾಗ ಯಾಕೆ ಎನ್ ಕೌಂಟರ್ ಆಗುವುದಿಲ್ಲ? ಎಂಬುದು ಉಪೇಂದ್ರ ಪ್ರಶ್ನೆ.

ಯಾರೋ ನಾಲ್ಕು ಜನರನ್ನು ಆರೋಪಿಗಳು ಎಂದು ನಿಲ್ಲಿಸಿ ಅವರನ್ನು ಎನ್ ಕೌಂಟರ್ ಮಾಡಿದರೆ ಅಲ್ಲಿಗೆ ಆ ಪ್ರಕರಣ ಮುಗಿಯುತ್ತದೆಯೇ? ಅಪರಾಧ ಎಸಗುವವರು ಯಾರೋ? ಶಿಕ್ಷೆಗೆ ಬಲಿಯಾಗುವವರೋ ಇನ್ಯಾರೋ? ಉಪೇಂದ್ರ ಟ್ವೀಟ್ ನಲ್ಲಿ ಅನೇಕ ಪ್ರಶ್ನೆಗಳಿಗೆ.

ಉಪೇಂದ್ರ ಟ್ವೀಟ್ ಕೇವಲ ಇದೊಂದೆ ಪ್ರಕರಣಕ್ಕೆ ಸೀಮಿತವಾಗಿ ಮಾಡಿ ನೋಡಿದರೆ ಅವರು ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದಾರೆ ಎಂದು ಇವತ್ತಿನ ಸಂದರ್ಭಕ್ಕೆ ಅನಿಸಬಹುದು. ಆದರೆ ವಿಶಾಲವಾಗಿ ಯೋಚನೆ ಮಾಡಿದರೆ ಹೌದಲ್ಲ ಉಳಿದ ಪ್ರಕರಣಗಳ ಕತೆ ಏನು? ಎಂಬ ಪ್ರಶ್ನೆಯೂ ನಮ್ಮ ಮನಸ್ಸಿನಲ್ಲಿ ಮೂಡದೆ ಉಳಿಯಲಾರದು.

Scroll to load tweet…