ಹೈದ್ರಾಬಾದ್ (ಡಿ.06): ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಎನ್‌ಕೌಂಟರ್‌ಗೆ ಬಲಿಯಾಗಿದ್ದು, ಆರೋಪಿಗಳ ಅಂತ್ಯಕ್ರಿಯೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಎನ್​ಕೌಂಟರ್​ಗೆ ಒಳಗಾದ ನಾಲ್ವರು ಆರೋಪಿಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅಂತ್ಯಕ್ರಿಯೆಗೆ ಆರೋಪಿಗಳ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲೇ ಆರೋಪಿಗಳ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಆರೋಪಿ ಮೊಹಮ್ಮದ್​ ಆರೀಫ್​ ಅಂತ್ಯಕ್ರಿಯೆಯನ್ನು ಜಾಕ್ಲೆರ್​ ಗ್ರಾಮದಲ್ಲಿ ನೇರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಇನ್ನು ಮೂರು ಆರೋಪಿಗಳಾದ ಜೋಲ್ಲು ಶಿವ, ಜೋಲ್ಲು ನವೀನ್​ ಹಾಗೂ ಚೆನ್ನಕೇಶವಲು ಅಂತ್ಯಕ್ರಿಯೆಯನ್ನು ಗುಂಡಿಗಡ್ಲ ಗ್ರಾಮದಲ್ಲಿ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಏರ್ಪಾಡು ಮಾಡುತ್ತಿರುವುದನ್ನು ಕಂಡ ಗ್ರಾಮಸ್ಥರು, ಇಲ್ಲಿ ಅಂತ್ಯಕ್ರಿಯೆ ನಡೆಸದಂತೆ ಪಟ್ಟು ಹಿಡಿದಿದ್ದಾರೆ. ಜನಾಕ್ರೋಶ ಹೆಚ್ಚಾದ ಕಾರಣಕ್ಕೆ ಆರೋಪಿಗಳ ಮನೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಕೊಂದಿದ್ದು ಸರಿ, ತಪ್ಪು: ಆರೋಪಿಗಳ ಕುಟುಂಬದವರ ಮಿಶ್ರ ಪ್ರತಿಕ್ರಿಯೆ!