ಬೆಂಗಳೂರು(ಡಿ.11)  ಪಂಚರಾಜ ಚುನಾವಣೆ ಫಲಿತಾಂಶ ಆಪರೇಶನ್ ಮಾಡಬೇಕು ಎಂದುಕೊಂಡಿದ್ದ ಬಿಜೆಪಿಗೆ ಅಬಾರ್ಶನ್ ಮಾಡಿಸಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ  ಬಿಜೆಪಿ ನಾಯಕ , ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಐದು ರಾಜ್ಯದಲ್ಲಿ ಗೆಲ್ಲುತ್ತೇವೆ ಎಂದಿದ್ದರು. ದೇಶದ  22 ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಒಂದು ಮನೆಯನ್ನು ಕಾಂಗ್ರೆಸ್ ಬಡಿದಾಡಿ ತಗೆದುಕೊಂಡಿದೆ. 108 ಮನೆಗಳಲ್ಲಿ ಒಂದು ಮನೆ ಪಡೆದಿದ್ದಾರೆ ಎಂದರು.

ಶನಿದೇವರು, ವಿಘ್ನೇಶ್ವರ ಇಬ್ಬರೂ ಪತ್ರಕರ್ತರೇ!

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ ಯಾವುದೇ ಅಬಾರ್ಷನ್ ಆಗಿಲ್ಲ.  ನಾವೂ ಆಪರೇಷನ್ ಮಾಡುವುದಿಲ್ಲ. ಕಾಂಗ್ರೆಸ್ ಜಿಲ್ಲಾ ನಾಯಕರು ಬಡಿದಾಡುತ್ತಿದ್ದಾರೆ ದೋಸ್ತಿ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡಬೇಕು ಆ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.