ಶನಿದೇವರು, ವಿಘ್ನೇಶ್ವರ ಇಬ್ಬರೂ ಪತ್ರಕರ್ತರೇ!  ಹೀಗೆ ಹೇಳಿದ್ದು ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ. ವಿಧಾನ ಪರಿಷತ್‌ ಕಲಾಪ ಆರಂಭಕ್ಕೂ  ಮುನ್ನ ಪತ್ರಕರ್ತರ ಬಳಿ ಬಂದು ಹೀಗೆ ಹೇಳಿದರು.

ಬೆಳಗಾವಿ : ಶನಿದೇವರ, ವಿಘ್ನೇಶ್ವರ ಇಬ್ಬರೂ ಪತ್ರಕರ್ತರೇ! ಹೀಗೆಂದು ಮಾಧ್ಯಮ ಪ್ರತಿನಿಧಿಗಳಿಗೆ ಎರಡೂ ಕೈಮುಗಿದು, ಜೋರಾಗಿ ನಗುತ್ತಾ ಹೇಳಿದವರು ಮಾತಿನ ಮಲ್ಲ, ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನ ಪರಿಷತ್‌ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಅವರ ಜೊತೆ ಮಾತನಾಡಿ, ಸಮೀಪದಲ್ಲಿರುವ ಪತ್ರಕರ್ತರ ಗ್ಯಾಲರಿ ಬಳಿ ಬಂದ ಅವರು, ‘ಶನಿದೇವರಿಗೆ, ವಿಘ್ನೇಶ್ವರನಿಗೆ ನಮಸ್ಕಾರಗಳು...’ ಎಂದು ಹೇಳತೊಡಗಿದರು.

ಯಾಕೆ ಸಾರ್‌ ಎಂದು ಕೇಳುತ್ತಿದ್ದಂತೆ, ಯಾವುದೇ ಕೆಲಸ ಸರಿಯಾಗಿ ಆಗಬೇಕಾದರೆ ಮೊದಲು ವಿಘ್ನೇಶ್ವರನಿಗೆ ನಮಸ್ಕಾರ ಮಾಡಬೇಕು, ಅದಕ್ಕೇ ನಿಮಗೆ ನಮಸ್ಕಾರ ಮಾಡಿದೆ. 

ಅದೇ ರೀತಿ ನಮ್ಮನ್ನು ಕಾಡಬೇಡಿ, ನಮ್ಮನ್ನು ಬಿಟ್ಟುಬಿಡಿ ಎಂದು ಶನಿದೇವರನ್ನು ಕೇಳಬೇಕು. ವಿಘ್ನೇಶ್ವರ ಹಾಗೂ ಶನಿದೇವರು ಎರಡೂ ನೀವೇ ಎಂದು ದೊಡ್ಡ ದನಿಯಲ್ಲಿ ನಗುತ್ತ ತಮ್ಮ ಆಸನದತ್ತ ತೆರಳಿದರು.