ಪಾಕ್ ವಶದಲ್ಲಿರುವ ಮಿಗ್-21 ಯುದ್ಧ ವಿಮಾನದ ಪೈಲೆಟ್| ಸ್ಪಷ್ಟನೆ ನೀಡುವಂತೆ ಪಾಕ್ ಗೆ ಸಮನ್ಸ್ ನೀಡಿದ ಭಾರತ| ಪೈಲೆಟ್ ಮಾಹಿತಿ ನೀಡುವಂತೆ ಭಾರತದ ಒತ್ತಡ| ಜಿನೆವಾ ಒಪ್ಪಂದದಂತೆ ಪೈಲೆಟ್ ಹಿಂದಿರುಗಿಸುವಂತೆ ಒತ್ತಾಯ| ಭಾರತದ ಹೈಕಮಿಷನರ್ ಗೆ ಸಮನ್ಸ್ ನೀಡಿದ ಪಾಕ್|  

ನವದೆಹಲಿ(ಫೆ.27): ಮಿಗ್-21 ಯುದ್ಧ ವಿಮಾನದ ಪೈಲೆಟ್ ಪಾಕಿಸ್ತಾನದ ವಶದಲ್ಲಿರುವ ಕುರಿತು ಭಾರತ ಸ್ಪಷ್ಟನೆ ನೀಡಿದೆ. ಅಲ್ಲದೇ ಜಿನೆವಾ ಒಪ್ಪಂದದಂತೆ ಪೈಲೆಟ್ ನನ್ನು ಸುರಕ್ಷಿತವಾಗಿ ಮರಳಿಸುವಂತೆ ಪಾಕಿಸ್ತಾನಕ್ಕೆ ಸಮನ್ಸ್ ಜಾರಿ ಮಾಡಿದೆ.

Scroll to load tweet…

ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಭಾರತ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದ್ದು, ಪಾಕಿಸ್ತಾನ ನಾಪತ್ತೆಯಾಗಿರುವ ಪೈಲಟ್ ಕುರಿತು ಮಾಹಿತಿ ನೀಡಬೇಕೆಂದು ಕೇಳಿದೆ.

Scroll to load tweet…

ಇದೇ ವೇಳೆ ಪಾಕಿಸ್ತಾನದಲ್ಲಿನ ಭಾರತ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರಿಗೆ ಪಾಕ್ ಸಮನ್ಸ್ ನೀಡಿದ್ದು, ಭಾರತದ ಕದನ ವಿರಾಮ ಉಲ್ಲಂಘನೆ ಕುರಿತು ಆರೋಪಿಸಿದೆ.

Scroll to load tweet…