ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಕುಲಭೂಷಣ್ ಜಾಧವ್ ಪ್ರಕರಣ ಪ್ರಚೋದನಾಕಾರಿಯಾಗಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.
ನವದೆಹಲಿ (ಮೇ.18): ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಕುಲಭೂಷಣ್ ಜಾಧವ್ ಪ್ರಕರಣ ಪ್ರಚೋದನಾಕಾರಿಯಾಗಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.
ನಾನು 40 ವರ್ಷಗಳಿಂದ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ. ನ್ಯಾಯಾಧೀಶರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನಮಗೆ ಗೊತ್ತಿರುತ್ತದೆ. ನಾನು ವಾದ ಮಾಡುತ್ತಿರುವಾಗ ನನ್ನಲ್ಲಿ ಪಾಸಿಟೀವ್ ಎನರ್ಜಿಯಿತ್ತು. ನನ್ನ ವಾದ ಜಡ್ಜ್'ಗಳಿಗೆ ಅರ್ಥವಾಗುತ್ತಿದೆಯೆಂದು ನನಗೆ ಅರ್ಥವಾಗುತ್ತಿತ್ತು. ನಾನವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಪಾಕಿಸ್ತಾನ ವಾದ ಮಾಡುತ್ತಿರುವಾಗ ನಾನು ತಲೆಕೆಡಿಸಿಕೊಳ್ಳಲಿಲ್ಲವೆಂದು ಹರೀಶ್ ಸಾಳ್ವೆ ಹೇಳಿದ್ದಾರೆ.
ಇದೊಂದು ಜಟಿಲವಾದ ವಿಚಾರವಾಗಿತ್ತು. ನಾವು ಬಹಳ ಶ್ರಮ ವಹಿಸಿದ್ದೇವೆ. ಸರ್ಕಾರ ನನ್ನ ಸಲಹೆ ಮೇಲೆ ಸಂಪೂರ್ಣ ನಂಬಿಕೆಯಿಟ್ಟು ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತು. ಕುಲಭೂಷಣ್ ಪರ ವಾದ ಮಾಡಲು 1 ರೂಪಾಯಿ ಫೀ ತೆಗೆದುಕೊಂಡಿದ್ದಕ್ಕೆ ಪ್ರತಿಕ್ರಿಯಿಸುತ್ತಾ ನಾನಿದನ್ನು ದೇಶದ ಹಿತಕ್ಕೋಸ್ಗರ ಮಾಡಿದ್ದೇನೆ ಎಂದಿದ್ದಾರೆ.
