ಉರಿ ದಾಳಿಯ ನಂತರ ಪಾಕಿಸ್ತಾನ ಹಾಗೂ ಭಾರತದಲ್ಲಿ ಸದಾ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು.
ಅಮೃತಸರ(ಜ.26): ಗಣರಾಜ್ಯೋತ್ಸವದ ಪ್ರಯುಕ್ತ ಭಾರತೀಯ ಗಡಿ ಭದ್ರತಾ ಪಡೆ ಸಿಬ್ಬಂದಿ ಇಲ್ಲಿನ ಗಡಿಪೋಸ್ಟ್'ನಲ್ಲಿ ಪಾಕಿಸ್ತಾನ ಯೋಧರಿಗೆ ಸಿಹಿ- ಹಣ್ಣುಗಳನ್ನು ನೀಡಿದರು.
ಈ ವೇಳೆ ಪಾಕಿಸ್ತಾನ ಗಡಿ ಭದ್ರತಾ ಪಡೆಯ ಕಮಾಂಡರ್ ಸೇರಿದಂತೆ ಪಾಕ್'ನ ಎಲ್ಲಾ ಯೋಧರು ಸಿಹಿಯನ್ನು ಪಡೆದು ಭಾರತೀಯ ಯೋಧರಿಗೆ ಹಸ್ತಲಾಘವ ಮಾಡಿದರು ಹಾಗೂ ಶುಭಾಶಯ ಕೋರಿದರು ಎಂದು ಬಿಎಸ್'ಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಉರಿ ದಾಳಿಯ ನಂತರ ಪಾಕಿಸ್ತಾನ ಹಾಗೂ ಭಾರತದಲ್ಲಿ ಸದಾ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು. ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಮಾತ್ರವಲ್ಲದೇ ದೀಪಾವಳಿ ಹಾಗೂ ಈದ್ ಹಬ್ಬದ ಸಂದರ್ಭದಲ್ಲೂ ಉಭಯ ದೇಶದ ಸೈನಿಕರು ಸಿಹಿ ಹಂಚಿ ಸಂಭ್ರಮಿಸುತ್ತಾರೆ.
