ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿಶ್ವಸಂಸ್ಥೆ| ಬಾಕಿ ಮೊತ್ತ ನೀಡುವಂತೆ ಮಹಾ ಪ್ರಧಾನ ಕಾರ್ಯದರ್ಶಿ ಮನವಿ| ಅಂಟೋನಿಯೋ ಗುಟಾರೆಸ್ ಮನವಿಗೆ ಸ್ಪಂದಿಸಿದ ಭಾರತ| ವಿಶ್ವಸಂಸ್ಥೆಗೆ ಬಾಕಿ ಮೊತ್ತ ಪಾವತಿಸಿದ ಭಾರತ| ಭಾರತವೂ ಸೇರಿದಂತೆ ಒಟ್ಟು 35 ರಾಷ್ಟ್ರಗಳಿಂದ ಬಾಕಿ ಮೊತ್ತ ಪಾವತಿ|

ವಿಶ್ವಸಂಸ್ಥೆ(ಅ.13): ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿಶ್ವಸಂಸ್ಥೆಗೆ, ಭಾರತ ತಾನು ನೀಡಬೇಕಿದ್ದ ಬಾಕಿ ಹಣವನ್ನು ನೀಡಿದೆ.

ವಿಶ್ವಸಂಸ್ಥೆಗೆ ಬಾಕಿ ನೀಡಬೇಕಿದ್ದ ಹಣವನ್ನು ಭಾರತ ಹಿಂತಿರುಗಿಸಿದ್ದು, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾಡಿದ್ದ ಮನವಿಗೆ ಸ್ಪಂದಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್, ಅಂಟೋನಿಯೋ ಗುಟೆರೆಸ್ ಮಾಡಿದ್ದ ಮನವಿಯಂತೆ ಬಾಕಿ ಹಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. 

193 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಅಧಿಕೃತ ಮಾಹಿತಿ ಪ್ರಕಾರ ವಿಶ್ವಸಂಸ್ಥೆ 200 ಮಿಲಿಯನ್ ಡಾಲರ್ ಹಣಕಾಸಿನ ಕೊರತೆ ಎದುರಿಸುತ್ತಿದೆ.

Scroll to load tweet…

ಈಗಾಗಲೇ 35 ರಾಷ್ಟ್ರಗಳು ಬಾಕಿ ಹಣವನ್ನು ಹಿಂತಿರುಗಿಸಿದ್ದು, ಇನ್ನೂ 64 ರಾಷ್ಟ್ರಗಳು ಬಾಕಿ ಮೊತ್ತವನ್ನು ನೀಡಬೇಕಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 

ವಿಶ್ವಸಂಸ್ಥೆಗೆ ಹಣ ವಾಪಸ್ ನೀಡಿರುವ ರಾಷ್ಟ್ರಗಳ ಪಟ್ಟಿಗಳನ್ನು ಸಯೀದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದು, ಭಾರತ, ಆಸ್ಟ್ರೇಲಿಯಾ, ಭೂತಾನ್, ಕೆನಡಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಜರ್ಮನಿ, ಐರ್ಲೆಂಡ್, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ಸಿಂಗಪೂರ್, ಸ್ವಿಟ್ಜರ್ಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳು ಬಾಕಿ ಮೊತ್ತ ಪಾವತಿಸಿವೆ.