ನವದೆಹಲಿ(ಡಿ.19): ನೋಟ್ ಬ್ಯಾನ್ ಬಿಸಿಯಿಂದ ತತ್ತರಿಸಿರುವ ನಾಗರೀಕರಿಗೆ ಸದ್ಯದ್ಲಲೇ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನ 2.5 ಲಕ್ಷದಿಂದ 4 ಲಕ್ಷಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಹಣಕಾಸು ಇಲಾಖೆ ಮೂಲಗಳನ್ನ ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

500 ಮತ್ತು 100 ರೂ. ನೋಟುಗಳ ನಿಷೇಧದಿಂದ ಕಷ್ಟ ಅನುಭವಿಸಿರುವ ಜನರಿಗೆ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸುವ ಮೂಲಕ ಮೋದಿ ಸರ್ಕಾರ ಸಿಹಿ ನೀಡಲು ಮುಂದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರದ ವಕ್ತಾರ ಫ್ರಾಂಕ್ ನೊರೊನ್ಹಾ, ವರದಿಗಳು ಆಧಾರ ರಹಿತ ಎಂದಿದ್ದಾರೆ.