ಸುಳ್ಳು ಆದಾಯ ಘೋಷಣೆಗಳಾಗುವ ಕಾರಣ ಆದಾಯ ತೆರಿಗೆ ಇಲಾಖೆ ಇವೆರಡೂ ಆದಾಯ ಘೋಷಿಸಿರುವ ವ್ಯಕ್ತಿಗಳ ಆದಾಯ ಮೂಲವನ್ನು ತನಿಖೆಗೊಳಪಡಿಸುತ್ತಿದೆ.
ನವದೆಹಲಿ(ಡಿ.4): ಆದಾಯ ಘೋಷಣಾ ಯೋಜನೆಯಡಿ ನಾಲ್ವರು ಸದಸ್ಯರಿರುವ ಮುಂಬೈ ಕುಟುಂಬ ಹಾಗೂ ಉದ್ಯಮಿ ಮಹೇಶ್ ಕುಮಾರ್ ಚಂಪಕ್ ಲಾಲ್ ಶಾನ ಆದಾಯ ತೆರಿಗೆ ಘೋಷಣೆಯನ್ನು ಆದಾಯ ತೆರಿಗೆ ಇಲಾಖೆ ತಿರಸ್ಕರಿಸಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.
ಮುಂಬೈನ ನಾಲ್ವರು ಸದಸ್ಯರಿರುವ ಮುಂಬೈ ಕುಟುಂಬದ 2 ಲಕ್ಷ ಕೋಟಿ ರೂ. ಹಾಗೂ ಅಹಮದಾಬಾದ್'ನ ಉದ್ಯಮಿ ಮಹೇಶ್ ಶಾನ 13,860 ಕೋಟಿ ರೂ. ಹಣವನ್ನು ತಿರಸ್ಕರಿಸಲಾಗಿದೆ. ಸುಳ್ಳು ಆದಾಯ ಘೋಷಣೆಗಳಾಗುವ ಕಾರಣ ಆದಾಯ ತೆರಿಗೆ ಇಲಾಖೆ ಇವೆರಡೂ ಆದಾಯ ಘೋಷಿಸಿರುವ ವ್ಯಕ್ತಿಗಳ ಆದಾಯ ಮೂಲವನ್ನು ತನಿಖೆಗೊಳಪಡಿಸುತ್ತಿದೆ.
ತೆರಿಗೆ ಪಾವತಿಸದವರು ಹಾಗೂ ಕಪ್ಪು ಹಣ ಹೊಂದಿರುವವರಿಗೆ ಆದಾಯ ತೆರಿಗೆ ಘೋಷಣೆಯಿಡಿ ದಂಡ ಪಾವತಿಯೊಂದಿಗೆ ತಮ್ಮ ಆದಾಯವನ್ನು ಬಹಿರಂಗಪಡಿಸುವಂತೆ ಸೆಪ್ಟಂಬರ್ 30ರವರೆಗೆ ಗಡುವು ವಿಧಿಸಲಾಗಿತ್ತು. ಈ ಯೋಜನೆಯಿಂದ 2016, ಅಕ್ಟೋಬರ್ 1 ರಂದು 64,275 ಮಂದಿ 64,275 ಕೋಟಿ ರೂ. ಆದಾಯ ಘೋಷಿಸಿಕೊಂಡಿದ್ದರು.
