ನವದೆಹಲಿ[ಜು.30]: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಾಗಿರುವ ಪಟ್ಟದಕಲ್ಲು, ವಿಜಯಪುರದ ಗೋಲ್‌ಗುಂಬಜ್‌ ಸೇರಿದಂತೆ ದೇಶದ 10 ಪಾರಂಪರಿಕ ಸ್ಥಳಗಳ ಪ್ರವೇಶ ಅವಧಿಯನ್ನು ಸೂರ್ಯೋದಯದಿಂದ ರಾತ್ರಿ 9ರವರೆಗೂ ವಿಸ್ತರಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ನಿರ್ಧರಿಸಿದೆ.

ಸದ್ಯ ಈ ಪಾರಂಪರಿಕ ತಾಣಗಳಿಗೆ ಸಂಜೆ 6ರ ನಂತರ ಪ್ರವೇಶ ಇಲ್ಲ. ಕೆಲವೊಂದು ಸ್ಥಳಗಳನ್ನು ರಾತ್ರಿ ಹೊತ್ತೂ ವೀಕ್ಷಿಸಲು ಪ್ರವಾಸಿಗರು ಹಾಗೂ ಸ್ಥಳೀಯರು ಬಯಸುತ್ತಿರುವ ಹಿನ್ನೆಲೆಯಲ್ಲಿ ಸಂಜೆ 6ರ ನಂತರವೂ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಪರಿಷ್ಕೃತ ಸಮಯ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಸೋಮವಾರ ತಿಳಿಸಿದರು.

ಗೋಳಗುಮ್ಮಟದ ಸ್ವಚ್ಛತೆಗೆ ಅಂಗವಿಕಲನ ನಿಸ್ವಾರ್ಥ ಸೇವೆ

ದೆಹಲಿಯ ಹುಮಾಯೂನ್‌ ಗೋರಿ, ಸಫ್ದರ್‌ಜಂಗ್‌ ಗೋರಿ, ಭುವನೇಶ್ವರದ ರಾಜರಾಣಿ ದೇಗುಲ, ಖಜುರಾಹೋದ ದುಲ್ಹದೇವ ದೇಗುಲ, ಕುರುಕ್ಷೇತ್ರದ ಶೇಖ್‌ ಚಿಲ್ಲಿ ಗೋರಿ, ಮಹಾರಾಷ್ಟ್ರದ ಮಾರ್ಕಂಡ ದೇಗುಲ ಸಮೂಹ, ವಾರಾಣಸಿಯ ಮನ್‌ ಮಹಲ್‌, ಗುಜರಾತಿನ ಪಠಾಣ್‌ನಲ್ಲಿರುವ ರಾಣಿ ಕಿ ಬಾವ್‌ ಪ್ರವೇಶಾವಧಿಯನ್ನು ಕೂಡ ವಿಸ್ತರಿಸಲಾಗಿದೆ.