ನವದೆಹಲಿ[ಜು.15]: ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಎನ್‌.ಡಿ.ತಿವಾರಿ ಅವರ ಪುತ್ರ ರೋಹಿತ್‌ ಶೇಖರ್‌ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪತ್ನಿಅಪೂರ್ವ ಶುಕ್ಲಾ ತಿಹಾರ್‌ ಜೈಲಿನಲ್ಲಿ ಗಿಣಿಶಾಸ್ತ್ರ ಅಧ್ಯಯನಕ್ಕೆ ಆಸಕ್ತಿ ತೋರಿದ್ದಾರೆ.

ಮಾಜಿ ಸಿಎಂ ತಿವಾರಿ ಪುತ್ರನ ಹತ್ಯೆ: ಪತ್ನಿ ಅಪೂರ್ವ ಅರೆಸ್ಟ್!

ವಾರದಲ್ಲಿ ಎರಡು ಬಾರಿ (ಬುಧವಾರ, ಶುಕ್ರವಾರ) ನಡೆಸುವ ತರಗತಿಗೆ ಅಪೂರ್ವ ತಪ್ಪದೇ ಹಾಜರಾಗುತ್ತಾರೆ. ತರಗತಿಯ ಮೊದಲ ಪಂಕ್ತಿಯಲ್ಲೇ ಕೂರುವ ಅಪೂರ್ವ, ಶ್ರದ್ಧೆಯಿಂದ ಅಧ್ಯಯನ ನಡೆಸುತ್ತಿದ್ದಾರೆ. ಅವರು ಇದುವರೆಗೂ ಯಾವುದೇ ತರಗತಿಗಳಲ್ಲಿ ಗೈರು ಹಾಜರಾಗಿಲ್ಲ. ಆಂಗ್ಲ ಮಾಧ್ಯಮದಲ್ಲಿಯೇ ಅಧ್ಯಯನ ನಡೆಸುತ್ತಿದ್ದಾರೆ ಎಂದು ತರಬೇತುದಾರರಾದ ಪ್ರತಿಭಾ ಸಿಂಗ್‌ ಅವರು ತಿಳಿಸಿದ್ದಾರೆ.

ಪತಿ ಕುಡಿದು ಬಂದ ಕಾರಣಕ್ಕೆ ವಾಗ್ವಾದ ನಡೆದು ಏ.16ರಂದು ರೋಹಿತ್‌ರನ್ನು ಉಸಿರುಗಟ್ಟಿಸಿ ಅವೂರ್ವ ಕೊಲೆಗೈದಿದ್ದರು.