ಡೆಹ್ರಾಡೂನ್[ಏ.24]: ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ ಎನ್. ಡಿ ತಿವಾರಿ ಪುತ್ರ ರೋಹಿತ್ ಶೇಖರ್ ಹತ್ಯೆ ನಡೆದ 9 ದಿನಗಳ ಬಳಿಕ ದೆಹಲಿ ಪೊಲೀಸರು ರೋಹಿತ್ ಪತ್ನಿ ಅಪೂರ್ವಾರನ್ನು ಬಂಧಿಸಿದ್ದಾರೆ. ರೋಹಿತ್ ಜೊತೆಗಿನ ದಾಂಪತ್ಯ ಜೀವನದಲ್ಲಿ ಅಪೂರ್ವ ಖುಷಿಯಾಗಿರಲಿಲ್ಲ. ಇದೇ ಕಾರಣದಿಂದ ಅವರು ತನ್ನ ಗಂಡನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎಂದು ಕ್ರೈಂ ಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಈ ಕೊಲೆಯಲ್ಲಿ ಬೇರಾರೂ ಶಾಮೀಲಾಗಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೂ ಮುನ್ನ ಪೊಲೀಸರು ರೋಹಿತ್ ಹೆಂಡತಿ, ಕಾರು ಚಾಲಕ ಹಾಗೂ ಮನೆ ಕೆಲಸದಾಳಿನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅಪೂರ್ವಾರನ್ನು ಸತತ ಮೂರು ದಿನಗಳವರೆಗೆ ತನಿಖೆ ನಡೆಸಿದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ರೋಹಿತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎಂಬುವುದು ಬಹಿರಂಗವಾಗಿತ್ತು. ಬಳಿಕವಷ್ಟೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.