ಆಗಸ್ಟ್ 11 ರಂದು ಮಾಜಿ ಕ್ರಿಕೆಟಿಗನಿಗೆ ಪ್ರಧಾನಿ ಪಟ್ಟ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 9:25 PM IST
Imran Khan will take oath as PM on August 11
Highlights

  • 1992ರ ವಿಶ್ವಕಪ್ ಕ್ರಿಕೆಟ್  ಹೀರೋಗೆ ಪಾಕಿಸ್ತಾನದ  ನೂತನ ಸಾರಥ್ಯ
  • ಬಹುಮತದ ಕೊರತೆಯಿರುವ ಕಾರಣ ಪಕ್ಷೇತರರ ಬೆಂಬಲ ಸಾಧ್ಯತೆ

ಇಸ್ಲಾಮಾಬಾದ್‌(ಜು.30): ಹಲವಾರು ವರ್ಷಗಳ ರಾಜಕೀಯ ಹೋರಾಟದ ನಂತರ ಮಾಜಿ ಕ್ರಿಕೆಟಿಗನ ಕನಸು ನನಸಾಗಿದೆ. 1992ರ ವಿಶ್ವಕಪ್ ಕ್ರಿಕೆಟ್  ಹೀರೋಗೆ ಪಾಕಿಸ್ತಾನದ  ನೂತನ ಸಾರಥ್ಯ ವಹಿಸಲಿದ್ದಾರೆ. 

ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್‌-ಇ-ಇನ್ಸಾಫ್‌ (ಪಿಟಿಐ) ಪ್ರಕಟಣೆ ತಿಳಿಸಿದೆ. ಜು. 25ರಂದು ನಡೆದ ಚುನಾವಣೆಯಲ್ಲಿ ಪಿಟಿಐ ಹೆಚ್ಚು ಸ್ಥಾನಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತದ ಕೊರತೆಯಿರುವ ಕಾರಣದಿಂದ ಪಕ್ಷೇತರ ಹಾಗೂ ಇತರ ಪಕ್ಷಗಳ ಬೆಂಬಲ ಪಡೆಯುವ ಸಾಧ್ಯತೆಯಿದೆ. 

ಆಗಸ್ಟ್ 11 ರಂದು ಇಮ್ರಾನ್ ಖಾನ್ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದು ಇದಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಪಿಟಿಐ ನಾಯಕ ನಯೀನಲ್ ಹಕ್ ತಿಳಿಸಿದ್ದಾರೆ.

 

loader