ಟಿಪ್ಪು ಜಯಂತಿ ಮೂಲಕ ಸಿಎಂ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ.  ಟಿಪ್ಪು ಇತಿಹಾಸ ಗೊತ್ತಿದ್ದರೂ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ ಎಂದು  ಸುವರ್ಣ ನ್ಯೂಸ್ ಗೆ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಬೆಂಗಳೂರು (ನ.09): ಟಿಪ್ಪು ಜಯಂತಿ ಮೂಲಕ ಸಿಎಂ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಟಿಪ್ಪು ಇತಿಹಾಸ ಗೊತ್ತಿದ್ದರೂ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ ಎಂದು ಸುವರ್ಣ ನ್ಯೂಸ್ ಗೆ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಟಿಪ್ಪು ಇತಿಹಾಸ ಗೊತ್ತಿದ್ದರೂ ಟಿಪ್ಪು ಜಯಂತಿ ಆಚರಣೆಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಮೇಲುಕೋಟೆಯಲ್ಲಿ ಹಿಂದೂಗಳ ಮೇಲೆ ಆಕ್ರಮಣ ಮಾಡಿದ್ದಾನೆ. ಕೊಡಗಲ್ಲಿ ಮಾರಣಹೋಮ ಮಾಡಿದ್ದ ಟಿಪ್ಪು ಸುಲ್ತಾನ್. ಅವನೊಬ್ಬ ಮತಾಂಧ. ರಾಜನೇ ಅಲ್ಲ. ಟಿಪ್ಪು ರಾಜನೆಂದು ಬಿಂಬಿಸಲು ಸರ್ಕಾರ ಹೊರಟಿದೆ. ರಾಜ್ಯದಲ್ಲಿ ಅಪಾಯಕಾರಿ ಸಂಸ್ಕೃತಿಯನ್ನು ಹುಟ್ಟು ಹಾಕಲೆತ್ನಿಸುತ್ತಿದೆ. ಇಸ್ಲಾಂನಲ್ಲಿ ಜಯಂತಿ ಆಚರಣೆಗೆ ಅವಕಾಶವೇ ಇಲ್ಲ. ಅದು ಯಾರೇ ಆದರೂ ಸಹ ಜಯಂತಿ ಆಚರಣೆ ಇರಲ್ಲ. ಎಲ್ಲಾ ಬಿಟ್ಟು ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿದೆ. ಕೆಲವರನ್ನು ಓಲೈಸಲು ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ. ಟಿಪ್ಪು ಕಾರ್ಯಕ್ರಮಕ್ಕೆ ಕರೆದಿದ್ದರೆ ಎಲ್ಲಾ ಹೇಳುತ್ತಿದ್ದೆ. ಹಿಂದೂಗಳ ಮೇಲಿನ ಟಿಪ್ಪು ಕ್ರೌರ್ಯ ವಿವರಿಸುತ್ತಿದ್ದೆ ಎಂದು ಸುವರ್ಣ ನ್ಯೂಸ್ ಗೆ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಟಿಪ್ಪು ಇತಿಹಾಸ ಹೇಳಿ ಬರಲು ನಾನು ನಿರ್ಧರಿಸಿದ್ದೆ. ಟಿಪ್ಪು ಜಯಂತಿಯಿಂದ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ. ಟಿಪ್ಪು ಸುಲ್ತಾನ್ ಕುರಿತು ಸಿಎಂ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ಸಿಎಂ ಚರ್ಚೆಗೆ ಬಂದ್ರೆ ಎಲ್ಲಿಯಾದರೂ ಸರಿ ಚರ್ಚೆಗೆ ಸಿದ್ಧವಾಗಿದ್ದೇನೆ. ಮನೆ ಮುರುಕುತನ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ರಾಜ್ಯ ಸರ್ಕಾರ ಟಿಪ್ಪು ಇತಿಹಾಸ ಸರಿಯಾಗಿ ಓದಬೇಕು ಎಂದು ಅನಂತ್ ಕುಮಾರ್ ಹೇಳಿದ್ದಾರೆ.