ನಾನು ಭಾರತೀಯ, ರಾಷ್ಟ್ರಭಾಷೆ ಹಿಂದಿಯಲ್ಲೇ ಮಾತಾಡ್ತೀನಿ: ಹೆಗಡೆ

news | Saturday, January 20th, 2018
Suvarna Web Desk
Highlights

ನನ್ನ ರಾಷ್ಟ್ರಭಾಷೆ ಹಿಂದಿಯಾಗಿರುವುದರಿಂದ ಆ ಭಾಷೆಯಲ್ಲಿಯೇ ಮಾತನಾಡುತ್ತೇನೆ. ನನಗೆ ಸಾಗರದಾಚೆಯ ಭಾಷೆಯ ಮೇಲೆ ವಿಶ್ವಾಸ ಇಲ್ಲ. ಇನ್ನೂ ನಾನು ಭಾರತೀಯನಾಗಿದ್ದೇನೆ. ಹೀಗಾಗಿ ರಾಷ್ಟ್ರಭಾಷೆಯಲ್ಲಿಯೇ ಮಾತನಾಡಲು ಇಚ್ಛಿಸುತ್ತೇನೆ ಎಂದು ಹೇಳುವ ಮೂಲಕ ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡರು.

ಬೆಂಗಳೂರು(ಜ.20): ನಾನು ಇನ್ನೂ ಭಾರತೀಯನಾಗಿರುವುದರಿಂದ ರಾಷ್ಟ್ರಭಾಷೆ ಹಿಂದಿಯಲ್ಲಿಯೇ ಮಾತನಾಡಲು ಇಚ್ಛಿಸುತ್ತೇನೆ ಎಂದು ಇಂಗ್ಲಿಷ್ ಭಾಷೆಯ ಕುರಿತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಎಚ್‌ಎಎಲ್‌'ನಲ್ಲಿ ನಡೆದ ಏರೋಸ್ಪೇಸ್ ಮತ್ತು ಏವಿಯೇಷನ್ ಕ್ಷೇತ್ರದಲ್ಲಿನ ಕೌಶಲ್ಯಾಭಿವೃದ್ಧಿ ಅವಕಾಶಗಳು ಮತ್ತು ಸವಾಲುಗಳು ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ರಾಷ್ಟ್ರಭಾಷೆ ಹಿಂದಿಯಾಗಿರುವುದರಿಂದ ಆ ಭಾಷೆಯಲ್ಲಿಯೇ ಮಾತನಾಡುತ್ತೇನೆ. ನನಗೆ ಸಾಗರದಾಚೆಯ ಭಾಷೆಯ ಮೇಲೆ ವಿಶ್ವಾಸ ಇಲ್ಲ. ಇನ್ನೂ ನಾನು ಭಾರತೀಯನಾಗಿದ್ದೇನೆ. ಹೀಗಾಗಿ ರಾಷ್ಟ್ರಭಾಷೆಯಲ್ಲಿಯೇ ಮಾತನಾಡಲು ಇಚ್ಛಿಸುತ್ತೇನೆ ಎಂದು ಹೇಳುವ ಮೂಲಕ ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡರು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಂದಿ, ಸಂಸದರೇ, ಸಂವಿಧಾನದ ಯಾವ ಭಾಗದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಒಪ್ಪಿಕೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಮೊದಲೇ

ವೈಮಾನಿಕ ಕ್ಷೇತ್ರದಲ್ಲಿ ಆಕಾಶದಷ್ಟು ಅವಕಾಶಗಳಿದ್ದು, ಭಾರತವು ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. 15 ರಾಷ್ಟ್ರಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಖಾಸಗಿ ಮತ್ತು ಸಾರ್ವಜನಿಕ ಒಪ್ಪಂದದ ಆಧಾರದ ಮೇಲೆ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಆರಂಭಿಸಲು ಉದ್ದೇಶಿಸಲಾಗಿದೆ. ಮುಂದಿನ ವರ್ಷ ಏಳು ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯನ್ಮೋಖವಾಗಿದ್ದೇವೆ. ನಾಗರಿಕ ಸೇವಾ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಐಎಫ್‌ಎಸ್ ಮಾದರಿಯಲ್ಲಿ ಐಐಎಸ್ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಕಿಲ್) ಪರೀಕ್ಷೆ ನಡೆಸಿ ಹೊಸ ಅಧಿಕಾರಿ ವರ್ಗ ಮತ್ತು ಕೇಡರ್‌'ಗಳ ರಚನೆಗೆ ಚಿಂತನೆ ನಡೆಸಲಾಗಿದೆ. ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಇಂಡಿಯಾ ಇಂಟರ್ ನ್ಯಾಷನಲ್ ಸ್ಕಿಲ್ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

 

ಹೆಗಡೆ ವಿರುದ್ಧ ಭೀಮಾಶಂಕರ ಪತ್ರ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ಹೊರಹಾಕಿದ್ದು, ಸಾಹಿತಿಗಳ ಕುರಿತು ಸಚಿವರ ಹೇಳಿಕೆಗೆ ಪಕ್ಷದ ಯುವಮೋರ್ಚಾದ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ.

ಕನ್ನಡ ಸಾಹಿತಿಗಳನ್ನು ಮತ್ತು ಕನ್ನಡ ರಾಜ್ಯ ಮನೆತನಗಳನ್ನು ನಿಂದಿಸಿ ಪಕ್ಷಕ್ಕೆ ಮುಜುಗರವನ್ನು ತಂದೊಡ್ಡಿದ್ದಾರೆ. ಮುಂದಿನ ದಿನದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಕನ್ನಡಿಗರನ್ನು ಅಮಾನಿಸುವ ಕೆಲಸ ಮಾಡದಂತೆ ಮತ್ತು ಸಾಹಿತಿಗಳಲ್ಲಿ ಕ್ಷಮೆ ಕೋರುವಂತೆ ಸೂಚಿಸಬೇಕು ಎಂದು ವಿನಂತಿಸಿದ್ದಾರೆ.

Comments 0
Add Comment

  Related Posts

  Anant Kumar Hegade Slams Intellectuals

  video | Wednesday, April 4th, 2018

  Anant Kumar Hegade Slams Intellectuals

  video | Wednesday, April 4th, 2018

  Ram Gopal Varma Reaction After Watching Tagaru

  video | Thursday, March 29th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk