2 ದಿನಗಳ ಕಾಲ ಗುಜರಾತ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೂರತ್ ಜನತೆಯನ್ನುದ್ದೇಶಿಸಿ ಮಾತನಾಡುತ್ತಾ, ನಿಮ್ಮ ಪರವಾಗಿ ಶೀಘ್ರದಲ್ಲಿಯೇ ನಾನು ಇಸ್ರೇಲ್ ಗೆ ತೆರಳಲಿದ್ದೇನೆ ಎಂದು ಹೇಳಿದ್ದಾರೆ.

ನವದೆಹಲಿ (ಏ.17): 2 ದಿನಗಳ ಕಾಲ ಗುಜರಾತ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೂರತ್ ಜನತೆಯನ್ನುದ್ದೇಶಿಸಿ ಮಾತನಾಡುತ್ತಾ, ನಿಮ್ಮ ಪರವಾಗಿ ಶೀಘ್ರದಲ್ಲಿಯೇ ನಾನು ಇಸ್ರೇಲ್ ಗೆ ತೆರಳಲಿದ್ದೇನೆ ಎಂದು ಹೇಳಿದ್ದಾರೆ.

ಸೂರತ್ ನಲ್ಲಿ ಭಾರೀ ಪ್ರಮಾಣದಲ್ಲಿ ವಜ್ರದ ವ್ಯಾಪಾರ ನಡೆಯಲಿದ್ದು, ಭಾರತದ ಅತೀ ದೊಡ್ಡ ವಜ್ರದ ನಗರಿ ಎನಿಸಿಕೊಂಡಿದೆ.ಅದೇ ರೀತಿ ಇಸ್ರೇಲ್ ತುಂಡು ವಜ್ರಗಳ ತಯಾರಿಕೆಯಲ್ಲಿ ಜಗತ್ತಿನಲ್ಲಿಯೇ ಭಾರೀ ಪ್ರಖ್ಯಾತವಾಗಿದೆ.

ನಾನು ಶೀಘ್ರದಲ್ಲೇ ನಿಮ್ಮ ಪರವಾಗಿ ಇಸ್ರೇಲ್ ಗೆ ತೆರಳಲಿದ್ದೇನೆ, ಇಸ್ರೇಲ್ ಗೆ ತೆರಳುತ್ತಿರುವ ಭಾರತದ ಮೊದಲ ಪ್ರಧಾನ ಮಂ ನಾನು. ಆ ದೇಶದೊಂದಿಗೆ ನಿಮ್ಮ ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಳ್ಳಿ ಎಂದು ಸೂರತ್ ಜನತೆಗೆ ಮೋದಿ ಆಶ್ವಾಸನೆ ನೀಡಿದ್ದಾರೆ.

 ಜುಲೈ 2 ನೇ ವಾರದಲ್ಲಿ ಹಂಬರ್ಗ್ ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ. ಅಲ್ಲಿಂದ ಭಾರತಕ್ಕೆ ವಾಪಸ್ಸಾಗುವ ವೇಳೆ ಇಸ್ರೇಲ್ ಗೆ ಭೇಟಿ ನೀಡುವ ಸಾಧ್ಯತೆಯಿದೆ. ಮೋದಿಯವರ ಭೇಟಿ ಐತಿಹಾಸಿಕವಾಗಲಿದೆ.