ಅದು ಹೆಸರಿಗೆ ಸಮುದಾಯ ಭವನ. ಆದ್ರೆ ಅಲ್ಲಿ ನಡೀತಿರೋದು ಮಾತ್ರ ಬಾರ್ ಅಂಡ್ ರೆಸ್ಟೋರೆಂಟ್. ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ನಿರ್ಮಾಣವಾದ ಸಮುದಾಯ ಭವನದಲ್ಲಿ ನಡೀತಿದ್ದ ಗುಂಡು ಪಾರ್ಟಿ, ಜೊತೆಗೆ ಕಾರ್ಡ್ಸ್ ಆಡೋ ದಂಧೆ, ಇದೀಗ ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಬೆಂಗಳೂರು(ಆ.31): ಸದಭಿವೃಚಿಯ ಉದ್ದೇಶಕ್ಕೆ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಆರಂಭಕ್ಕೂ ಮುನ್ನವೇ ಅನೈತಿಕ ತಾಣವಾಗಿದೆ. ಕೆಳಮಹಡಿಯು ಬಾರ್ ಎಂಡ್ ರೆಸ್ಟೋರೆಂಟ್ ಆಗಿ ಮಾರ್ಪಟ್ಟಿದೆ. 1968 ರಲ್ಲಿ ಜಯನಗರ ಬ್ಲಾಕ್ನ ಸ್ಥಳೀಯರು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬಿಡಿಎ ನಿಂದ ಸೈಟ್ ಪಡೆದಿದ್ದು, ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಆದರೆ 2014ಕ್ಕೆ ಮೂವತ್ತು ವರ್ಷ ಮುಗಿದ ಹಿನ್ನೆಲೆ ಸಮುದಾಯ ಭವನವನ್ನ ಕೆಡವಿ ಹೊಸದಾಗಿ ಕಟ್ಟಿಲಾಗ್ತದೆ.
ಅಂದಹಾಗೆ, ಸಮುದಾಯ ಭವನದ ಆಡಳಿತ ಮಂಡಳಿಯಲ್ಲಿ ಬರೋಬ್ಬರಿ 900 ಜನ ಸದಸ್ಯರಿದ್ದಾರೆ. ವಿಷಯ ಅಂದ್ರೆ ಬಿಡಿಎ, ಬಿಬಿಎಂಪಿ, ಅಬಕಾರಿ ಇಲಾಖೆಯ ಅಧಿಕಾರಿಗಳೇ ಇಲ್ಲಿ ಬಂದು ಮಜಾ ಮಾಡ್ತಿದ್ದಾರೆ. ಅಂದ ಹಾಗೆ ಹೊರಗಿನವ್ರೂ ಸಹ ಸಮುದಾಯ ಭವನದ ಬಾರ್ ಆಂಡ್ ರೆಸ್ಟೋರೆಂಟ್ ಗೆ 60 ರೂಪಾಯಿ ನೀಡಿ ಬರ್ತಿದ್ದಾರೆ . ಇಷ್ಟೆಲ್ಲ ನಡೀತಿದ್ರೂ ಬಿಡಿಎ ಮಾತ್ರ ಕಣ್ಮುಚ್ಚಿ ಕುಳಿತಿದೆ.
ಅನೈತಿಕ ಕಾರ್ಯದಲ್ಲಿ ಇಲಾಖೆಯ ಅಧಿಕಾರಿಗಳೇ ಶಾಮಿಲಾಗಿರೋದು ಮಾತ್ರಾ ನಾಚಿಕೆಗೇಡಿನ ವಿಷಯ. ಈಗಲಾದ್ರು ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೆ ಕ್ರಮ ಜರುಗಿಸಬೇಕಿದೆ. ಸಮುದಾಯ ಭವನದಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕಿದೆ.
