ಕೇವಲ 251 ರು.ಗೆ ಮೊಬೈಲ್ ನೀಡುವುದಾಗಿ ಘೋಷಿಸಿ ಸುದ್ದಿಯಾಗಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿಯ ಮಾಲೀಕ ಗೋಯೆಲ್, ಇದೀಗ ಮತ್ತೆ ಜನಕ್ಕೆ ಫೋನ್ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ನೋಯ್ಡಾ(ಡಿ.4): ಕೇವಲ 251 ರು.ಗೆ ಮೊಬೈಲ್ ನೀಡುವುದಾಗಿ ಘೋಷಿಸಿ ಸುದ್ದಿಯಾಗಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿಯ ಮಾಲೀಕ ಗೋಯೆಲ್, ಇದೀಗ ಮತ್ತೆ ಜನಕ್ಕೆ ಫೋನ್ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಅಗ್ಗದ ಬೆಲೆಗೆ ಮೊಬೈಲ್ ಪೂರೈಸಲು ನನ್ನಿಂದ 3.5 ಕೋಟಿ ರು. ಪಡೆದ ಉದ್ಯಮಿಗಳು ಪರಾರಿಯಾಗಿದ್ದರು. ಪರಿಣಾಮ ಗ್ರಾಹಕರಿಗೆ ಮೊಬೈಲ್ ನೀಡಲಾಗದೇ ನಾನು 6 ತಿಂಗಳು ಜೈಲು ಸೇರಿದ್ದೆ. ಇದೀಗ ನಾನು ನೀಡಿದ ದೂರಿನ ಅನ್ವಯ ಆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಈಗಲೂ ಸರ್ಕಾರ ನನ್ನ ನೆರವಿಗೆ ಬಂದರೆ 251 ರು.ಗೆ ಫ್ರೀಡಂ ಮೊಬೈಲ್ ನೀಡುವುದಾಗಿ ಗೋಯೆಲ್ ಹೇಳಿದರು. ಈ ಮೂಲಕ ಮತ್ತೆ ರಿಂಗಿಂಗ್ ಬೆಲ್ ಕಂಪನಿ ಸದ್ದು ಮಾಡಲು ಆರಂಭ ಮಾಡಿದೆ.