ನವದೆಹಲಿ[ಜೂ. 06] ವಾಯುಸೇನೆಗೆ ಸೇರಿದ್ದ ವಿಮಾನ ನಾಪತ್ತೆ ಒಂದೊಂದೆ ಕಣ್ಣಿರ ಕತೆಗಳನ್ನು ತೆರದು ಇಡುತ್ತಿದೆ. ನಾಪತ್ತೆಯಾಗಿರುವ ಎಎನ್-32 ಚಲಾವಣೆ ಮಾಡುತ್ತಿದ್ದ ಪೈಲಟ್ ಅಶೀಶ್ ತನ್ವಾರ್  ಅವರ ಪತ್ನಿ ಸಂಧ್ಯಾ ತನ್ವಾರ್ ನೀಡಿದ ವಿವರಣೆಗಳು ಎಂಥವರ ಮನಸ್ಸನ್ನು ಒಂದು ಕ್ಷಣ ಕದಡಬಲ್ಲದು. ಗಂಡ ಚಲಾವಣೆ ಮಾಡುತ್ತಿದ್ದ ವಿಮಾನ ನಾಪತ್ತೆಯಾಗುತ್ತಿರುವುದನ್ನು ಹೆಂಡತಿ ಹತ್ತಿರದಿಂದ ಗಮನಿಸಿದ್ದರು.

ಏರ್ ಟ್ರಾಫಿಕ್ ಕಂಟ್ರೋಲ್ ರೂಂ ನಲ್ಲಿ ವಿಮಾನ ನಾಪತ್ತೆಯಾಗುವ ವೇಳೆ ಇದ್ದ ಸಂಧ್ಯಾ ವಿಮಾನ ಕಣ್ಮರೆಯಾಗುತ್ತಿರುವುದನ್ನು ಗಮನಿಸಿದ್ದಾರೆ.  ಅಸ್ಸಾಂನ ಜೋರಾತ್ ವಾಯು ನೆಲೆಯಿಂದ ವಿಮಾನ  ಟೇಕ್ ಆಫ್ ಆಗುವ ವೇಳೆ ಅಂದರೆ ಮಧ್ಯಾಹ್ನ 12.25ರ ಸುಮಾರಿನಲ್ಲಿ ಸಂಧ್ಯಾ ಏರ್ ಟ್ರಾಫಿಕ್ ಕಂಟ್ರೋಲ್ ರೂಂ ನಲ್ಲಿ ಕೆಲಸ ಮಾಡುತ್ತಿದ್ದರು.

ಕಣ್ಮರೆಯಾದ ವಿಮಾನ ಶೋಧಕ್ಕೆ ಧುಮುಕಿದ ಇಸ್ರೋ, ನೌಕಾಪಡೆ

ವಿಮಾನ ನಾಪತ್ತೆ ನಂತರ ವಾಯುಸೇನೆ ಹುಡುಕಾಡ ನಡೆಸಿದರೂ ಯಾವುದೇ ಸುಳಿವು ಪತ್ತೆ ಆಗಿಲ್ಲ. ಕಳೆದ ವರ್ಷ್ ಫೆಬ್ರವರಿಯಲ್ಲಿ ಆಶೀಸ್ ಮತ್ತು ಸಂಧ್ಯಾ ದಾಂಪತ್ಯಕ್ಕೆ ಕಾಲಿರಿಸಿದ್ದರು.