ಪಾಕ್ ನಿಂದ ತವರು ನಾಡಿಗೆ ಮರಳಿದ್ದ ಅಭಿ| ವೈದ್ಯಕೀಯ ಪರೀಕ್ಷೆ ಮುಗಿಸಿ ರಜೆಯಲ್ಲಿದ್ದ  ವಿಂಗ್ ಕಮಾಂಡರ್| ರಜೆಯಲ್ಲಿದ್ದರೂ ಮನೆಬಿಟ್ಟು ಸೇನೆ ಸೇರಿಕೊಂಡ ಕಮಾಂಡರ್‌ ಅಭಿನಂದನ್‌

ಶ್ರೀನಗರ[ಮಾ.27]: ಇತ್ತೀಚೆಗಷ್ಟೇ ಪಾಕ್‌ ವಶದಿಂದ ಬಿಡುಗಡೆಯಾಗಿ ಬಂದು, 4 ವಾರಗಳ ರಜೆಯ ಮೇಲೆ ತೆರಳಿದ್ದ ಭಾರತೀಯ ವಾಯುಪಡೆಯ ವಿಂಗ್‌ಕಮಾಂಡರ್‌ ಅಭಿನಂದನ್‌, ಮತ್ತೆ ತಮ್ಮ ಸ್ಕ್ವಾಡ್ರನ್‌ ಸೇರಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಜೆಯ ಅವಧಿಯನ್ನು ಚೆನ್ನೈನಲ್ಲಿನ ಕುಟುಂಬ ಸದಸ್ಯರ ಜೊತೆ ಕಳೆಯುವ ಬದಲು ಅಭಿನಂದನ್‌ ಅವರು ಸೇನಾ ನೆಲೆಯಲ್ಲೇ ಇರಲು ಬಯಸಿ, ಶ್ರೀನಗರಕ್ಕೆ ಆಗಮಿಸಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುನೆಲೆ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನ ಎಫ್‌-16 ಯುದ್ಧ ವಿಮಾನವೊಂದನ್ನು ಬೆನ್ನಟ್ಟಿಹೋಗಿದ್ದ ಅಭಿ, ಪಾಕ್‌ ಯೋಧರ ಕೈಗೆ ಸಿಕ್ಕಿಬಿದ್ದಿದ್ದರು.

ಎರಡು ದಿನಗಳ ಕಾಲ ಅವರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಪಾಕ್‌, ಅವರಿಗೆ ಭಾರೀ ಮಾನಸಿಕ ಹಿಂಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲ ಪರೀಕ್ಷೆಗೆ ಗುರಿಪಡಿಸಿದ ಬಳಿಕ ನಾಲ್ಕು ವಾರಗಳ ಅನಾರೋಗ್ಯ ರಜೆ ಮೇಲೆ ಮನೆಗೆ ಕಳುಹಿಸಲಾಗಿತ್ತು.