ನವದೆಹಲಿ : ಪುಲ್ವಾಮ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ದಾಳಿ ನಡೆಸಿ ಉಗ್ರರ ಕ್ಯಾಂಪ್ ಗಳನ್ನು ಉಡೀಸ್ ಮಾಡಿವೆ. 

"

ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮಿರ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸಿದೆ. 

ನಾಲ್ಕು ದಶಕದ ನಂತರ LOC ದಾಟಿದ ಭಾರತದ ಲೋಹದ ಹಕ್ಕಿಗಳು!

ಈ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸುದ್ದಿಗೋಷ್ಠಿ ಕರೆದಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿರುವ ಸಂಬಂಧ ಇಮ್ರಾನ್ ಖಾನ್ ಸಭೆ ನಡೆಸಲಿದ್ದಾರೆ. 

ಭಾರತೀಯ ಸೇನೆ ನಡೆಸಿದ ದಾಳಿಯಿಂದ ತತ್ತರಿಸಿದ್ದು, ಈ ನಿಟ್ಟಿನಲ್ಲಿ ತುರ್ತು ಸಭೆ ಕರೆಯಲಾಗಿದೆ. 

1ಕ್ಕೆ 20, ವಾರ್ ಆದ್ರೆ ಪಾಕ್‌ಗೆ ಕುತ್ತು: ಇಲ್ಲಿದೆ ಭಾರತದ ತಾಕತ್ತು!

ಭಾರತೀಯ ಸೇನೆಯು ಗಡಿ ರೇಖೆ ದಾಟಿ ನಡೆಸಿದ ದಾಳಿಯಲ್ಲಿ 300 ಉಗ್ರರು ಉಡೀಸ್ ಆಗಿರುವ ಸಾಧ್ಯತೆ ಇದೆ.