ನವದೆಹಲಿ(ಫೆ.26): ಪುಲ್ವಾಮಾ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತೀಯ ವಾಯುಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 300 ಭಯೋತ್ಪಾದಕರನ್ನು ಜಹನ್ನುಮ್(ನರಕಕ್ಕೆ)ಕಳುಹಿಸಿಯಾಗಿದೆ.

ಈ ಮಧ್ಯೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭಾವ್ಯತೆ ಹೆಚ್ಚಾಗಿದ್ದು, ಒಂದು ವೇಳೆ ಯುದ್ಧವಾದರೆ ಈ ಬಾರಿ ಪಾಕಿಸ್ತಾನ ವಿಶ್ವದ ಭೂಪಟದಿಂದ ಮಾಯವಾಗುವುದು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

ಭಾರತದ ಅನಿರೀಕ್ಷಿತ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನ, ಯುದ್ಧವಾದರೆ ಏನು ಗತಿ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದೆ. ಮೇಲ್ನೋಟಕ್ಕೆ ಯುದ್ಧಕ್ಕೆ ಸಿದ್ಧ ಎಂದು ಅಬ್ಬರಿಸುತ್ತಿರುವಪಾಕಿಸ್ತಾನಕ್ಕೆ, ಭಾರತದ ಸೈನ್ಯ ಶಕ್ತಿಯ ಅರಿವಿದೆ.

ಎರಡೂ ದೇಶಗಳು ಅಣ್ವಸ್ತ್ರ ಹೊಂದಿದ್ದರೂ, ಭಾರತದ ಸೈನ್ಯ ಶಕ್ತಿ ಮತ್ತು ಶಸ್ತ್ರ ದಾಸ್ತಾನು ಕಂಡು ಪಾಕಿಸ್ತಾನ ಬೆಚ್ಚಿ ಬಿದ್ದಿರುವುದು ಸೂರ್ಯ, ಚಂದ್ರರಷ್ಟೇ ಸತ್ಯ. ಕೇವಲ ಒಂದು ದಾಳಿಗೆ ಸಾವಿರ ಕೆಜಿ ಬಾಂಬ್ ಬಳಸಿರುವ ಭಾರತ, ಸಂಪೂರ್ಣ ಯುದ್ಧವಾದರೆ ಅದೆಷ್ಟು ವಿನಾಶ ಮಾಡಬಹುದು ಎಂಬುದು ಪಾಕಿಸ್ತಾನದ ಆತಂಕಕ್ಕೆ ಕಾರಣವಾಗಿದೆ.

ಅದರಂತೆ ಭಾರತ ಮತ್ತು ಪಾಕಿಸ್ತಾನದ ಸೈನ್ಯ ಶಕ್ತಿಯತ್ತ ಗಮನಹರಿಸುವುದಾದರೆ...