ಬಾಗಲಕೋಟೆ(ಡಿ.19): ರಾಸಲೀಲೆ ಪ್ರಕರಣದ ಆರೋಪದಲ್ಲಿ ಸಿಲುಕಿದ ನಂತರ ರಾಜೀನಾಮೆ ಮಾಯವಾಗಿದ್ದ  ಶಾಸಕ ಎಚ್.ವೈ.ಮೇಟಿ  ಮೊದಲ ಬಾರಿಗೆ ಬಾಗಲಕೋಟೆಯ ನವನಗರದಲ್ಲಿರುವ ತಮ್ಮ ಗೃಹ ಕಚೇರಿಗೆ ಆಗಮಿಸಿದರು.

ಮೇಟಿ ಆಗಮನ  ಹಿನ್ನೆಲೆಯಲ್ಲಿ  ಎರಡು ಕೆಎಸ್​`ಆರ್`​ಪಿ, ಎರಡು ಡಿಎಆರ್ ವಾಹನ ಸೇರಿದಂತೆ 100ಕ್ಕೂ ಹೆಚ್ಚು ಜನ ಪೊಲೀಸರು ಭದ್ರತೆ ವಹಿಸಿದ್ದರು. ಇತ್ತ ಮೇಟಿ ಮನೆಗೆ ಬರುತ್ತಿದ್ದಂತೆ ಸ್ಥಳದಲ್ಲಿದ್ದ ಸಹಸ್ರಾರು ಕಾರ್ಯಕರ್ತರು, ಬೆಂಬಲಿಗರು,  ಮೇಟಿಯನ್ನು ಕಾಂಗ್ರೆಸ್​ ಕಿಂಗ್ ಎಂದು ಘೋಷಣೆ ಕೂಗಿ ಜೈಕಾರ ಹಾಕಿದರು.

ಕೆಲ ಹೊತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ಮೇಟಿ, ನಂತರ ಸುದ್ದಿ ಗೋಷ್ಠಿ ನಡೆಸಿದರು. ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಆದ್ದರಿಂದ ನಾನು ಏನು ಮಾತನಾಡೋದಿಲ್ಲ ಎಂದ ಮೇಟಿ, ತನಿಖೆ ನಂತರ ಸತ್ಯ ಹೊರಬರಲಿದೆ ಎಂದರು.