ಲಂಡನ್ / ನವದೆಹಲಿ[ಮೇ. 10]   ಹೈದರಾಬಾದ್ ಮೂಲದ ವ್ಯಕ್ತಿಯನ್ನು ಲಂಡನ್ ನಲ್ಲಿ  ಬುಧವಾರ ದುಷ್ಕರ್ಮಿಯೊಬ್ಬ ಚಾಕು ಇರಿದು ಬರ್ಬರವಾಗಿ ಹತ್ಯೆ  ಮಾಡಿದ್ದಾನೆ.  ಮೊಹಮ್ಮದ್ ನದೀಮುದ್ದೀನ್ ಕೊಲೆಯಾದ ವ್ಯಕ್ತಿ.

ನದೀಮುದ್ದೀನ್ ಅವರು ಲಂಡನ್‍ನ ಟೆಸ್ಕೋ ಸೂಪರ್ ಮಾರ್ಕೆಟ್‍ನ ಮಾಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನದೀಮುದ್ದೀನ್ ಕಳೆದ 6 ವರ್ಷದಿಂದ ಲಂಡನ್‍ನಲ್ಲಿ ವಾಸಿಸುತ್ತಿದ್ದರು.  ಒಂದು ತಿಂಗಳ ಹಿಂದಷ್ಟೆ ಅವರ ಪತ್ನಿ ಲಂಡನ್‍ಗೆ ಆಗಮಿಸಿದ್ದರು.

ಮತದಾನಕ್ಕೆ ವಿದೇಶದಿಂದ ಬಂದರು: ಮೋದಿಗಾಗಿ ANYTHING ಅಂದರು

ನದೀಮುದ್ದೀನ್ ಬುಧವಾರ ಮನೆಗೆ ಹಿಂತಿರುಗಲಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ಮಾಲ್ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಮಾಲ್ ಸಿಬ್ಬಂದಿ ಕೂಡ ಹುಡುಕಾಟ ನಡೆಸಿದಾಗ ನದೀಮುದ್ದೀನ್ ಪಾರ್ಕಿಂಗ್‍ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಕೆಲಸಕ್ಕೆ ತೆರಳಿದ್ದ ಪತಿ ಮನೆಗೆ ಬಂದಿಲ್ಲ. ಇದರಿಂದ ವಿಚಲಿತಳಾದ ಪತ್ನಿ ಕರೆ ಮಾಡಿ ವಿಚಾರಿಸಿದ್ದಾರೆ. ಸೂಪರ್ ಮಾರುಕಟ್ಟೆಯಲ್ಲಿಯೂ ಆತ ಇರಲಿಲ್ಲ. ಇದಾದ ಮೇಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಕೊಲೆಯಾಗಿರುವುದು ತಿಳಿದು ಬಂದಿದೆ.