ನವದೆಹಲಿ[ಜು.20]: ಬ್ರಿಟಿಷ್‌ ವಿಜ್ಞಾನಿ ಡಾರ್ವಿನ್‌ ಪ್ರತಿಪಾದಿಸಿರುವಂತೆ ಮಂಗನಿಂದ ಮಾನವನ ಉಗಮವಾಗಿಲ್ಲ. ಮಾನವರು ಋುಷಿಗಳ ವಂಶಸ್ಥರು ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಸಂಸದ ಸತ್ಯಪಾಲ್‌ ಸಿಂಗ್‌ ಹಳೆಯ ಸಿದ್ಧಾಂತವನ್ನು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ಮಸೂದೆಯೊಂದರ ಚರ್ಚೆಯ ವೇಳೆ ಮಾತನಾಡಿದ ಸಿಂಗ್‌, ನಾವು ಋುಷಿಗಳ ವಂಶಸ್ಥರು ಎನ್ನುವುದು ನಮ್ಮ ನಂಬಿಕೆ. ಮಂಗನಿಂದ ಮಾನವ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಶಾಲೆಗಳ ಪಠ್ಯದಿಂದಲೂ ಇಂಥ ಅಂಶ ತೆಗೆದುಹಾಕಬೇಕು ಎಮದು ಹೇಳಿದ್ದಾರೆ. ಈ ಹೇಳಿಕೆಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿಂದೆ ಮಾನವ ಸಂಪನ್ಮೂಲ ಸಚಿವರಾಗಿದ್ದಾಗಲೂ ಸತ್ಯಪಾಲ್‌ ಸಿಂಗ್‌ ಡಾರ್ವಿನ್‌ ಸಿದ್ಧಾಂತವನ್ನು ಪ್ರಶ್ನಿಸಿದ್ದರು.