ಪಾಟ್ನಾ[ಜೂ.22]: ಬಿಹಾರದ ಮುಜಫ್ಫರ್ ನಗರದಲ್ಲಿರುವ ಕೃಷ್ಣಾ ಮೆಡಿಕಲ್ ಕಾಲೇಜು ಆ್ಯಂಡ್ ಹಾಸ್ಪಿಟಲ್ ಆವರಣದಲ್ಲಿ ಮಾನವ ಮೂಳೆಗಳು ಪತ್ತೆಯಾಗಿವೆ. ಇದೇ ಆಸ್ಪತ್ರೆಯಲ್ಲಿ 108ಕ್ಕೂ ಅಧಿಕ ಮಕ್ಕಳು ಮೆದುಳು ಜ್ವರಕ್ಕೀಡಾಗಿ ಸಾವನ್ನಪ್ಪಿದ್ದರು ಎಂಬುವುದು ಉಲ್ಲೇಖನೀಯ.

ಖಾಲಿ ಹೊಟ್ಟೆಯಲ್ಲಿ ಲಿಚೀ ಹಣ್ಣನ್ನು ತಿನ್ಲೇಬೇಡಿ. ಯಾಕೆ ಕೇಳಿ...

ಆಸ್ಪತ್ರೆ ಆವರಣದಲ್ಲಿ ಮಾನವ ಮೂಳೆಗಳು ಪತ್ತೆಯಾದ ಬಳಿಕ ಪ್ರತಿಕ್ರಿಯಿಸಿರುವ ವೈದ್ಯಾಧಿಕಾರಿ ಎಸ್. ಕೆ. ಶಾಹಿ 'ಇದು ಪೋಸ್ಟ್ ಮಾರ್ಟಂ ಅಧಿಕಾರಿಗಳಿಗೆ ಸಂಬಂಧಿಸಿದ ವಿಷಯ. ಹೀಗಿದ್ದರೂ ಮನುಷ್ಯರ ಭಾವನೆಗಳಿಗೆ ಬೆಲೆ ನೀಡಬೇಕು. ನಾನು ಈ ಕುರಿತಾಗಿ ಪ್ರಾಂಶುಪಾಲರಲ್ಲಿ ಚರ್ಚಿಸಿ ತನಿಖೆ ನಡೆಸಲು ತಂಡ ರಚಿಸಲು ತಿಳಿಸುತ್ತೇನೆ' ಎಂದಿದ್ದಾರೆ.

ಮುಜಫ್ಫರ್ ನಗರ ಶ್ರೀ ಕೃಷ್ಣಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ತನಿಖಾ ತಂಡ ಮೂಳೆಗಳು ಪತ್ತೆಯಾದ ಸ್ಥಳದ ಪರಿಶೀಲನೆ ನಡೆಸಿದ್ದು, ಇಷ್ಟು ಪ್ರಮಾಣದ ಮೂಳೆಗಳು ಹೇಗೆ ಬಂದವು ಎಂಬುವುದನ್ನು ತನಿಖೆ ನಡೆಸುತ್ತಿದೆ. 

125 ಮಕ್ಕಳ ಸಾವಿನ ಬಳಿಕ ಎಚ್ಚೆತ್ತ ಸಿಎಂ ನಿತೀಶ್

ಬಿಹಾರದಲ್ಲಿ ಈವರೆಗೂ ಸುಮಾರು 145 ಕ್ಕೂ ಅಧಿಕ ಮಂದಿ ಮೆದುಳು ಜ್ವರದಿಂದ ಮೃತಪಟ್ಟಿದ್ದಾರೆ. ಈ ವಿಚಾರ ಲೋಕಸಭಾ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಇನ್ನು 'ಲಿಚಿ' ಹಣ್ಣು ಸೇವಿಸಿರುವಿದರಿಂದ ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಲಾಗಿತ್ತಾದರೂ, ನಿಖರ ಕಾರಣ ಮಾತ್ರ ತಿಳಿದು ಬಂದಿರಲಿಲ್ಲ. ಇದೀಗ ಆಸ್ಪತ್ರೆ ಆವರಣದಲ್ಲಿ ಮಾನವ ಮೂಳೆಗಳು ಸಿಕ್ಕಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.