ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಜಾರಿಗೆ |  ಏ.1 ರಿಂದ ತಯಾರಾಗುವ ವಾಹನಗಳಿಗೆ ಅನ್ವಯ |  ಹಳೇ ವಾಹನಗಳ ಬಗ್ಗೆ ಚುನಾವಣೆ ನಂತರ ನಿರ್ಧಾರ

ಬೆಂಗಳೂರು (ಏ. 01): ವಾಹನ ಮತ್ತು ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶ ದಂತೆ ದೇಶದಲ್ಲಿ 2019 ರ ಏ.1 ರಿಂದ ತಯಾರಾಗುವ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಹನ ತಯಾರಕರು, ಡೀಲರ್‌ಗಳು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನೋಂದಣಿ ಫಲಕ ಅಳವಡಿಸಬೇಕು ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.

ಎಚ್‌ಎಸ್‌ಆರ್‌ಪಿ ನೋಂದಣಿ ಫಲಕ ಕಡ್ಡಾಯಗೊಳಿಸುವ ಸಂಬಂಧ 2018 ರ ಡಿಸೆಂಬರ್‌ನಲ್ಲೇ ಕೇಂದ್ರದಿಂದ ಸೂಚನೆ ಬಂದಿದೆ. 2019 ರ ಏಪ್ರಿಲ್ 1 ರಿಂದ ತಯಾರಾಗುವ ವಾಹನಗಳಿಗೆ ಅನ್ವಯ ಆಗಲಿದೆ. ಇದಕ್ಕೂ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್ ಆರ್‌ಪಿ ನೋಂದಣಿ ಫಲಕ ಅಳವಡಿಸುವ ತೀರ್ಮಾನವನ್ನು ರಾಜ್ಯ ಸರ್ಕಾರದ ವಿವೇಚನೆಗೆ ಬಿಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಈ ಬಗ್ಗೆ ತೀರ್ಮಾನ ತಿಳಿಸುವ ಸಾಧ್ಯತೆಯಿದೆ ಎಂದರು.

ಏನಿದು ಎಚ್‌ಎಸ್‌ಆರ್‌ಪಿ?

ಇದು ವಾಹನಗಳಿಗೆ ಅತಿ ಸುರಕ್ಷತೆಯ ನೋಂದಣಿ ಫಲಕ. ಅಲ್ಯೂಮಿನಿ ಯಂನಿಂದ ಮಾಡಿದ ಈ ಫಲಕದಲ್ಲಿ ನೋಂದಣಿ ಸಂಖ್ಯೆಯ ಜತೆಗೆ ಏಳು ಅಂಕಿಗಳ ವಿನೂತನ ಲೇಸರ್ ಕೋಡ್,
ಕ್ರೊಮಿಯಂ ಆಧಾರಿತ ಹಾಲೋಗ್ರಾಮ್, ಎಂಜಿನ್‌ನ ಚಾಸಿ ನಂಬರ್, ಜತೆಗೆ ನೀಲಿ ಒಣ್ಣದಲ್ಲಿ ‘ಐಎನ್‌ಡಿ’ ಎಂದು ಬರೆಯಲಾಗಿರುತ್ತದೆ. ಈ ಫಲಕವನ್ನು ಯಾರೂ ತಿದ್ದಲು ಅಥವಾ ನಕಲು ಮಾಡಲು
ಸಾಧ್ಯವಿಲ್ಲ. ಒಂದು ವೇಳೆ ವಾಹನ ಕಳುವಾದರೆ ಪತ್ತೆ ಹಚ್ಚಲು ಸಹಾಯಕವಾಗುತ್ತದೆ.