ಚಿಕನ್ಗುನ್ಯ ನೋವನ್ನು ಹೇಗೆ ನಿಭಾಯಿಸಬೇಕು ಎಂದು ಇಲ್ಲಿದೆ ನೋಡಿ ನಿಮಗಾಗಿ ಕೆಲವು ಮಾಹಿತಿ.

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಭಾದಿಸುತ್ತಿರವ ಚಿಕನ್ಗುನ್ಯ ನೋವನ್ನು ತಡೆದುಕೊಳ್ಳಲಾಗದೆ ಜನ ಹೈರಾಣಾಗಿ ಬಿಡುತ್ತಾರೆ. ಚಿಕನ್ಗುನ್ಯ ನೋವನ್ನು ಹೇಗೆ ನಿಭಾಯಿಸಬೇಕು ಎಂದು ಇಲ್ಲಿದೆ ನೋಡಿ ನಿಮಗಾಗಿ ಕೆಲವು ಮಾಹಿತಿ.

ಚಿಕನ್ಗುನ್ಯದ ನೋವು ಹೆಚ್ಚಾಗಿರಲು ಕಾರಣ ದೇಹದಲ್ಲಿ ನೀರಿನ ಕೊರತೆ ಕಾರಣ. ದೇಹದಲ್ಲಿ ಉಂಟಾದ ನಿರ್ಜಲೀಕರಣವೇ ಕೀಲುಗಳ ನೋವಿಗೆ ಕಾರಣವಾಗುತ್ತದೆ. ದಿನಕ್ಕೆ ಸುಮಾರು 3 ರಿಂದ 4 ಲೀ. ನೀರು ನಿಮ್ಮ ದೇಹಕ್ಕೆ ಅಗತ್ಯವಿದೆ. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ.

ಚಿಕನ್ಗುನ್ಯ ಬಂದಾಗ ದೇಹದಲ್ಲಿ ಡಿ ಜೀವಸತ್ವದ ಕೊರತೆ ಹೆಚ್ಚಿರುತ್ತದೆ. ವಿಟಮಿನ್ ಡಿ ಅಧಿಕವಾಗಿರುವ ತರಕಾರಿಗಳನ್ನು ಸೇವಿಸಿ ಮತ್ತು ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.

ಯೋಗ ಮಾಡಿ. ಸೂರ್ಯನಮಸ್ಕಾರ ಮಾಡಿ ಇದರಿಂದ ದೇಹಕ್ಕೆ ರಕ್ತಸಂಚಾರ ಆಗುವುದರೊಂದಿಗೆ ಮೈ ಕೈ ನೋವು ಕಡಿಮೆ ಯಾಗುತ್ತದೆ.

ಪ್ರತಿ ನಿತ್ಯ ಕನಿಷ್ಟ 20 ನಿಮಿಷ ನಡೆಯಿರಿ. ಇದರಿಂದ ಕೂಡಾ ಚಿಕನ್ಗುನ್ಯದ ನೋವು ಕಡಿಮೆಯಾಗುತ್ತದೆ.

ಕೆಂಪು ಕಲ್ಲುಸಕ್ಕರೆ ಸೇವಿಸಿ. ಹಾಗೂ ಅರಿಶಿಣ ಬೆರೆಸಿದ ಹಾಲನ್ನು ಸೇವಿಸಿ. ಹಣ್ಣು ತರಕಾರಿ ಮತ್ತು ಹಣ್ಣಿನ ರಸವನ್ನು ಸೇವಿಸುತ್ತಿರಿ, ಹಾಗೂ ಬಿಸಿ ನೀರಿನಿಂದ ಸ್ನಾನ ಮಾಡಿ, ಕುರುಕಲು ತಿಂಡಿಯನ್ನು ತ್ಯಜಿಸಿ, ಆದಷ್ಟು ಸೊಪ್ಪು ತರಕಾರಿಗಳನ್ನು ಸೇವಿಸಿ.ಅತಿಯಾದ ಕಾರವನ್ನು ಸೇವಿಸಬೇಡಿ