10 ತಿಂಗಳು ಇಮ್ರಾನ್ ಖಾನ್ ಜೊತೆ ಸಂಸಾರ ನಡೆಸಿದ್ದ 2ನೇ ಪತ್ನಿ ರೆಹಾಂ ಖಾನ್, ಪಾಕಿಸ್ತಾನ ಹಾಗೂ ಲಂಡನ್ನಿನ ಪ್ರಸಿದ್ಧ ಟೀವಿ ಆ್ಯಂಕರ್. ಲಿಬಿಯಾ ಮೂಲದ ರೆಹಾಂ, ಇಮ್ರಾನ್ ಖಾನ್’ರನ್ನು ಮದುವೆಯಾಗಿ, ವಿಚ್ಛೇದನ ಪಡೆದ ನಂತರ ಇಮ್ರಾನ್’ಗೆ ಬದ್ಧ ವೈರಿಯಾಗಿಬಿಟ್ಟಿದ್ದಾರೆ. ಇದೀಗ ರೆಹಾಂ ಆತ್ಮಕತೆ ಬರೆದಿದ್ದಾರೆ. ಅದರಲ್ಲಿ ಇಮ್ರಾನ್ ಬಗ್ಗೆ ಅತ್ಯಂತ ರಹಸ್ಯ ಹಾಗೂ ಸ್ಫೋಟಕ ಎನ್ನಬಹುದಾದ ವಿಷಯಗಳಿವೆ.
ಕರಾಚಿ[ಆ.02]: 10 ತಿಂಗಳು ಇಮ್ರಾನ್ ಖಾನ್ ಜೊತೆ ಸಂಸಾರ ನಡೆಸಿದ್ದ 2ನೇ ಪತ್ನಿ ರೆಹಾಂ ಖಾನ್, ಪಾಕಿಸ್ತಾನ ಹಾಗೂ ಲಂಡನ್ನಿನ ಪ್ರಸಿದ್ಧ ಟೀವಿ ಆ್ಯಂಕರ್. ಲಿಬಿಯಾ ಮೂಲದ ರೆಹಾಂ, ಇಮ್ರಾನ್ ಖಾನ್’ರನ್ನು ಮದುವೆಯಾಗಿ, ವಿಚ್ಛೇದನ ಪಡೆದ ನಂತರ ಇಮ್ರಾನ್’ಗೆ ಬದ್ಧ ವೈರಿಯಾಗಿಬಿಟ್ಟಿದ್ದಾರೆ. ಇದೀಗ ರೆಹಾಂ ಆತ್ಮಕತೆ ಬರೆದಿದ್ದಾರೆ. ಅದರಲ್ಲಿ ಇಮ್ರಾನ್ ಬಗ್ಗೆ ಅತ್ಯಂತ ರಹಸ್ಯ ಹಾಗೂ ಸ್ಫೋಟಕ ಎನ್ನಬಹುದಾದ ವಿಷಯಗಳಿವೆ.
ಮೋದಿ ನೋಡಿ ಕಲಿಯಿರಿ
ಇಮ್ರಾನ್ ಖಾನ್‌ಗೆ ತಾನು ಪಾಕಿಸ್ತಾನದ ಪ್ರಧಾನಿಯಾಗಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇತ್ತು. ಆದರೆ ಅದೆಲ್ಲ ಸಾಧ್ಯವಿಲ್ಲದ ಮಾತು ಎಂದು ನನಗೆ ಅನ್ನಿಸುತ್ತಿತ್ತು. ಆಗೆಲ್ಲ ಅವರಿಗೆ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಉದಾಹರಣೆ ಕೊಡುತ್ತಿದ್ದೆ. ಮೋದಿ ದಶಕಗಳ ಕಾಲ ಗುಜರಾತಿಗೆ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ತೆಗೆದುಕೊಂಡ ಗಟ್ಟಿ ನಿರ್ಧಾರಗಳ ಫಲವಾಗಿ ತಮ್ಮ ಬಗ್ಗೆ ಏನೆಲ್ಲ ಟೀಕೆಯಿದ್ದರೂ ಪ್ರಧಾನಿಯಾದರು. ನೀವೂ ಅವರಂತೆ ಕಷ್ಟಪಟ್ಟರೆ ಪ್ರಧಾನಿಯಾಗಬಹುದು ಎಂದು ಹೇಳುತ್ತಿದ್ದೆ.
ಇನ್ನು ಕೆಲವೊಮ್ಮೆ ದಕ್ಷಿಣ ಆಫ್ರಿಕಾದ ದಂತಕತೆ ನೆಲ್ಸನ್ ಮಂಡೇಲಾರ ಹೋರಾಟದ ಉದಾಹರಣೆ ನೀಡುತ್ತಿದ್ದೆ. ನಾನೇನೇ ಹೇಳಿದರೂ, ತಾನು ಪ್ರಧಾನಿಯಾಗಲು ಇದು ಅತ್ಯಂತ ಸೂಕ್ತ ಕಾಲ ಎಂದು ಇಮ್ರಾನ್ ಆಗಲೇ ನಿರ್ಧರಿಸಿಯಾಗಿತ್ತು. ‘ಆದರೆ ಇಮ್ರಾನ್, ನೆಲ್ಸನ್ ಮಂಡೇಲಾ 27 ವರ್ಷಗಳ ಕಾಲ ಮುಂದೇನು ಎಂಬುದು ಗೊತ್ತಿಲ್ಲದೆ ಜೈಲಿನಲ್ಲಿ ಕೊಳೆತಿದ್ದರು. ನರೇಂದ್ರ ಮೋದಿ 10 ವರ್ಷ ಗುಜರಾತಿನಲ್ಲಿ ಬೆವರು ಹರಿಸಿದರು. ಹಾಗೇ ಖೈಬರ್ ಪಖ್ತೂನ್ವಾದಲ್ಲಿ ನಿಮ್ಮ ಸಾಮರ್ಥ್ಯವೇನು ಎಂಬುದನ್ನು ತೋರಿಸಿ. ಆಮೇಲೆ ಕೇಂದ್ರ ಸರ್ಕಾರದ ಕಡೆ ನೋಡಿ’ ಎಂದು ಒಮ್ಮೆ ಹೇಳಿದ್ದೆ.
‘ನನಗೀಗ ಎಷ್ಟು ವರ್ಷ ಗೊತ್ತಾ’ ಎಂದು ಸಿಟ್ಟಿನಿಂದ ಕೇಳಿದ್ದರು. ‘ಹಿಲರಿ ಕ್ಲಿಂಟನ್‌ಗೂ 67 ಆಗಿದೆ. ಹಾಗಂತ ಆಕೆ ಅಷ್ಟಕ್ಕೇ ಬಿಟ್ಟುಬಿಡ್ತಾಳಾ?’ ಎಂದು ಕೇಳಿದ್ದೆ. ಆದರೆ ಇಮ್ರಾನ್ ಒಮ್ಮೊಮ್ಮೆ ಎಷ್ಟು ಮೊಂಡಾಗಿ ವಾದಿಸುತ್ತಿದ್ದರು ಅಂದರೆ ನಾನು ಉಸಿರು ಬಿಗಿಹಿಡಿದು ಸಹಿಸಿಕೊಳ್ಳಬೇಕಾಗುತ್ತಿತ್ತು. ಚಡಪಡಿಸುವ ಮಗುವಿನಂತೆ ಅವರು ಆಡುತ್ತಿದ್ದರು.
