ರೈಲ್ವೆ ಇಲಾಖೆ ಕೇಳಿದ ಈ ಪ್ರಶ್ನೆಗೆ ಉತ್ತರಿಸಿ - 10 ಲಕ್ಷ ಬಹುಮಾನ ಗೆಲ್ಲಿ..!

First Published 27, Mar 2018, 3:52 PM IST
How can Indian railways raise Money Answer this and win Cash prizes
Highlights

ರೈಲ್ವೆ ಇಲಾಖೆ ಕೇಳಿದ ಪ್ರಶ್ನೆಗೆ ಉತ್ತರಿಸಿ  ಲಕ್ಷಾಂತರ ಬಹುಮಾನ ಗೆಲ್ಲಲು ಇಲ್ಲಿದೆ ಅವಕಾಶ

ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಇದೀಗ ಒಂದು ಹೊಸ ಸ್ಪರ್ಧೆಯೊಂದನ್ನು ನೀಡಿದೆ. ಈ ಸ್ಪರ್ಧೆಯಲ್ಲಿ  ಪ್ರಶ್ನೆಯೊಂದನ್ನು ಕೇಳಲಾಗಿದೆ.

ಜನರಿಗೆ ಉತ್ತಮ ಸೇವೆಯನ್ನು ಒದಗಿಸಲು ರೈಲ್ವೆ ಇಲಾಖೆಯು ಹೆಚ್ಚು ಹಣವನ್ನು ಗಳಿಕೆ ಮಾಡುವುದು ಹೇಗೆ ಎಂದು ಪ್ರಶ್ನೆ ಕೇಳಲಾಗಿದೆ.

ಜನ ಭಾಗಿದಾರಿ ಕಾರ್ಯಕ್ರಮದ ಮೂಲಕ ಜನರು ಇಲ್ಲಿ ತಮ್ಮ ಐಡಿಯಾಗಳನ್ನು ರೈಲ್ವೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು.  ಜನರು ತಮ್ಮ ಐಡಿಯಾಗಳನ್ನು ಹಂಚಿಕೊಂಡಿದ್ದಕ್ಕೆ ರೈಲ್ವೆ ಇಲಾಖೆ 10 ಲಕ್ಷದವರೆಗೂ ಬಹುಮಾನವನ್ನು ನೀಡುತ್ತಿದೆ. ಸೂಕ್ತ ಉತ್ತರಕ್ಕೆ ರೈಲ್ವೆ ಇಲಾಖೆ 10 ಲಕ್ಷ ಬಹುಮಾನವನ್ನು ನೀಡುತ್ತದೆ.

ಆನ್ ಲೈನ್ ಮೂಲಕ  ಸ್ಪರ್ಧೆಯನ್ನು ಏರ್ಪಡಿಸಿದ್ದು, ಮೈ ಗವರ್ನಮೆಂಟ್ App ನಲ್ಲಿ ನಿಮ್ಮ ಐಡಿಯಾಗಳನ್ನು ನೀಡಬಹುದಾಗಿದೆ.

loader