ಮಂಗಳೂರು ನೋಡಿದ್ವಿ..ಮಳೆಗೆ ಬೆಂಗಳೂರು ಸನ್ನದ್ಧವಾಗಿದೆಯಂತೆ!

How Bengaluru is Prepared For Monsoon This Year
Highlights

  • ಕರಾವಳಿ ಕರ್ನಾಟಕದಲ್ಲಿ ಮಳೆಯ ಅರ್ಭಟಕ್ಕೆ ಮುಳುಗಿದ ಮಂಗಳೂರು
  • 2017ರಲ್ಲಿ ನರಳಿದ್ಧ ಬೆಂಗಳೂರು ಈ ಬಾರಿ ಹೇಗೆ ತಯಾರಿಮಾಡಿಕೊಂಡಿದೆ?   

 

ಬೆಂಗಳೂರು:  ಈ ಬಾರಿ ಮುಂಗಾರುವಿನ ಅಬ್ಬರ ಜೋರಾಗಿದೆ. ಕರಾವಳಿ ಕರ್ನಾಟಕದಲ್ಲಿ ಮಳೆಯ ಅರ್ಭಟ ಸ್ಥಳೀಯಾಡಳಿತ ಸಂಸ್ಥೆಗಳ ಪೂರ್ವಸಿದ್ಧತೆ ಹಾಗು ಕಾರ್ಯಕ್ಷಮತೆಯನ್ನು ತೆರೆದಿಟ್ಟಿದೆ.

ಮಳೆಗಾಲದಲ್ಲಿ ನಗರಗಳ ಮೂಲಭೂತಸೌಕರ್ಯಗಳ ನಿಜರೂಪ ದರ್ಶನವಾಗುತ್ತದೆ.  ರಸ್ತೆಗಳು, ರಸ್ತೆಬದಿ ಮರಗಳು, ಹಳೆ ಗೋಡೆ/ಕಟ್ಟಡಗಳು, ವಿದ್ಯುತ್ ಪೂರೈಕೆ, ಚರಂಡಿ ಇತ್ಯಾದಿ ವ್ಯವಸ್ಥೆಯ ನಿರ್ವಹಣೆ ಹೇಗಿದೆ ಎಂದು ಮಳೆರಾಯ ಎಕ್ಸ್ ಪೋಸ್ ಮಾಡುತ್ತಾನೆ.  2016 ರಲ್ಲಿ ಚೆನ್ನೈ  2017ರಲ್ಲಿ ಬೆಂಗಳೂರು ನೆರೆಗಳು  ಸ್ಥಳೀಯಾಡಳಿತ ಸಂಸ್ಥೆಗಳ ಪೂರ್ವಸಿದ್ಧತೆ, ನಿರ್ವಹಣೆ ಹಾಗೂ ಕಾರ್ಯಕ್ಷಮತೆ ಹೇಗಿದೆಯೆಂದು ತೋರಿಸಕೊಟ್ಟಿವೆ.    

ಕಳೆದ ಬಾರಿ ಬೆಂಗಳೂರಿನಲ್ಲಂತೂ ಸಾರ್ವಜನಿಕರು ಪಟ್ಟ ಪಾಡಂತೂ ಹೇಳಲಾಗದು. ಕಳಪೆ ಕಾಮಗಾರಿಯೋ, ಅಥವಾ ಮಳೆ ತೀವ್ರತೆಯೋ, ಒಟ್ಟಿನಲ್ಲಿ ನಗರಾದ್ಯಂತ ಗುಂಡಿಮಯ ರಸ್ತೆಗಳು ಒಂದುಕಡೆಯಾದರೆ, ಬ್ಲಾಕ್ ಆಗಿರುವ ಚರಂಡಿಗಳು ಇನ್ನೊಂದು ಕಡೆ. ಪರಿಣಾಮವಾಗಿ ರಸ್ತೆಗಳು ಕೆರೆಯೋ, ನದಿಯೋ  ಎಂಬ ಆನುಮಾನ ಹುಟ್ಟುವಂತಿತ್ತು.  

ಇನ್ನು, ಮಳೆ ನೆರೆಯಲ್ಲಿ ಕೊಚ್ಚಿ ಹೋಗಿ, ಗೋಡೆ ಕುಸಿದು, ಮರ/ ಮರದ ಕೊಂಬೆ ಬಿದ್ದು ಹಲವಾರು ಮಂದಿ ಕಳೆದ ವರ್ಷ ಪ್ರಾಣಕಳೆದುಕೊಂಡಿದ್ದರು.   ಮರಗಳು/ ಮರಗಳ ಕೊಂಬೆಗಳು ಬಿದ್ದು ಜಖಂಗೊಂಡ  ವಾಹನಗಳು ಅದೆಷ್ಟೋ.    

ಅದಿರಲಿ ಈ ಬಾರಿ ಮಳೆಗಾಲಕ್ಕೆ ಬಿಬಿಎಂಪಿ ಯಾವ ರೀತಿಯ ಪೂರ್ವಸಿದ್ಧತೆ ಮಾಡಿಕೊಂಡಿದೆ ಎಂಬುವುದರ ಬಗ್ಗೆ ಮೇಯರ್ ಸಂಪತ್ ರಾಜ್ suvarnanews.com ಜೊತೆ ಮಾತನಾಡಿದ್ದಾರೆ.  ಅವರೇನು ಹೇಳಿದ್ದಾರೆ ನೋಡೋಣ.... 

"

 

 

loader