ನಿವೇಕೆ ಮದುವೆಯಾಗಿಲ್ಲ ವಾಜಪೇಯಿ?! ಪ್ರಶ್ನೆಗಳ ಹೂಬಾಣವನ್ನು ವಾಜಪೇಯಿ ಸ್ವೀಕರಿಸಿದ್ದೇಗೆ?! ನಾನು ಬ್ರಹ್ಮಚಾರಿಯಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದ ವಾಜಪೇಯಿ! ಅವಿವಾಹಿತರಾಗಿ ಉಳಿಯಲು ತಮ್ಮದೇ ಕಾರಣ ನೀಡಿದ್ದ ಅಟಲ್

ನವದೆಹಲಿ(ಆ.17): ಎಲ್ಲರಿಗೂ ಗೊತ್ತಿರುವಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಜನ್ಮ ಅವಿವಾಹಿತರಾಗಿಯೇ ಉಳಿದಿದ್ದರು. ಈ ಕುರಿತು ಅನೇಕ ಬಾರಿ ಹಲವರು ವಾಜಪೇಯಿ ಅವರಿಗೆ ಪ್ರಶ್ನೆ ಕೇಳಿದ್ದುಂಟು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕವಿ ಹೃದಯದ ವಾಜಪೇಯಿ ವಿವಾಹವಾಗದಿರುವುದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಆದರೆ ತಮ್ಮತ್ತ ಬರುವ ಈ ಪ್ರಶ್ನೆಗಳ ಹೂಬಾಣವನ್ನು ವಾಜಪೇಯಿ ಅತ್ಯಂತ ನಗುಮುಖದಿಂದಲೇ ಸ್ವೀಕರಿಸುತ್ತಿದ್ದರು.

ನೀವೇಕೆ ಮದುವೆಯಾಗಿಲ್ಲ ಎಂದು ವಾಜಪೇಯಿ ಅವರನ್ನು ಕೇಳಿದರೆ ನಗುತ್ತಲೇ ಉತ್ತರಿಸುತ್ತಿದ್ದ ವಾಜಪೇಯಿ, ನಾನು ಅವಿವಾಹಿತ ನಿಜ, ಆದರೆ ಬ್ರಹ್ಮಚಾರಿಯಲ್ಲ ಎಂದು ಪ್ರಶ್ನೆ ಕೇಳಿದವರು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಿದ್ದರು.

ಇನ್ನೂ ಕೆಲವೊಮ್ಮೆ ನನ್ನನ್ನು ಯಾವ ಹೆಣ್ಣೂ ಇಷ್ಟಪಡುತ್ತಿರಲಿಲ್ಲ ಎಂದು ಹೇಳುತ್ತಿದ್ದ ವಾಜಪೇಯಿ, ತಾವು ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ ಎಂದು ಸತ್ಯವನ್ನೇ ಹೇಳುತ್ತಿದ್ದರು.