Asianet Suvarna News Asianet Suvarna News

35 ಜನರ ಪ್ರಾಣ ಕಾಪಾಡಿ ಜೀವತೆತ್ತ ಸಾಕುನಾಯಿ!

ಪ್ರಾಣಿಗಳಿಗೆ ಮಾತು ಬರುವುದಿಲ್ಲವಾದರೂ ಅನ್ನ ಹಾಕಿದ ಮಾಲಿಕರ ಪ್ರೀತಿ, ಖಣವನ್ನು ಅವು ಎಂದಿಗೂ ಮರೆಯುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತಿದೆ ಉತ್ತರ ಪ್ರದೇಶದಲ್ಲಿ ನಡೆದ ಆ ಘಟನೆ. ತನ್ನ ಮಾಲೀಕನರುವ ಕಟ್ಟಡಕ್ಕೆ ಬೆಂಕಿ ತಗುಲಿದೆ ಎಂಬ ವಿಚಾರ ತಿಳಿದ ನಾಯಿ ಸಮಯ ಪ್ರಜ್ಞೆ ಮೆರೆದು 35ಕ್ಕೂ ಹೆಚ್ಚು ಮಂದಿಯ ಪ್ರಾಣ ಕಾಪಾಡಿದೆ. ದುರಾದೃಷ್ಟವಶಾತ್ ಇವರೆಲ್ಲರ ಪಾಲಿಗೆ ಹೀರೋ ಆದ ಆ ನಾಯಿ ಮಾತ್ರ ಇದೇ ದುರಂತದಲ್ಲಿ ಸಾವನ್ನಪ್ಪಿದೆ.

How a pet dog in UP saved 30 people from horrific fire and died himself
Author
Bangalore, First Published Apr 13, 2019, 1:21 PM IST

ಲಕ್ನೋ[ಏ.13]: ಕೆಲವೊಮ್ಮೆ ಮೂಕ ಪ್ರಾಣಿಗಳು ಮಾಡುವ ಕೆಲಸ ಮಾನುಷ್ಯರನ್ನು ಜೀವನ ಪರ್ಯಂತ ಅವುಗಳಿಗೆರ ಋಣಿಯಾಗುವಂತೆ ಮಾಡುತ್ತದೆ. ುತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ಸಂದರ್ಭದಲ್ಲಿ ಸಾಕು ನಾಯಿಯೊಂದು ಎಲ್ಲರನ್ನೂ ಅಲರ್ಟ್ ಮಾಡಿದೆ. ಇದರಿಂದ ಜನರೂ ಸೂಕ್ತ ಸಮಯಕ್ಕೆ ಎಚ್ಚೆತ್ತು ಅಲ್ಲಿಂದ ದೂರ, ಸುರಕ್ಷಿತ ಸ್ಥಳಕ್ಕೆ ತೆರಳಿ ತಮ್ಮ ಪ್ರಾಣ ಕಾಪಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ದುರಾದೃಷ್ಟವಶಾತ್ 35ಕ್ಕೂ ಹೆಚ್ಚು ಮಂದಿಯ ಪ್ರಾಣ ಕಾಪಾಡಿದ ಆ ಮೂಕ ನಾಯಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

ರೈಲು ಅಪಘಾತದಲ್ಲಿ ಮಾಲೀಕ ನಿಧನ: ಶವ ಬಿಟ್ಟು ಕದಲದ ನಾಯಿ!: ವಿಡಿಯೋ ವೈರಲ್

ಬಾಂದಾ ಜಿಲ್ಲೆಯ ಲಖನ್ ಕಾಲೋನಿಯ ಬಹುಮಹಡಿ ಕಟ್ಟಡದಲ್ಲಿದ್ದ ಫರ್ನೀಚರ್ ಶೋ ರೂಂನಲ್ಲಿ ಗುರುವಾರ ತಡರಾತ್ರಿ ಬೆಂಕಿ ತಗುಲಿತ್ತು. ಈ ವೇಳೆ ಎಚ್ಚೆತ್ತ ಶೋ ರೂಂ ಮಾಲಿಕನ ನಾಯಿ ಜೋರಾಗಿ ಬೊಗಳಿ ಎಲ್ಲರನ್ನೂ ಎಬ್ಬಿಸಿದೆ. ಬೆಂಕಿ ಕಂಡ ಜನರು ಆ ಕೂಡಲೇ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಕಟ್ಟಡದಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಕಾರಣ ನಾಯಿ ಈ ದುರಂತದಲ್ಲಿ ಸಾವನ್ನೊಪ್ಪಿದೆ. ಸ್ಟೋಟದಿಂದಾಗಿ ಆಸುಪಾಸಿನ ನಾಲ್ಕು ಕಟ್ಟಡಗಳು ಧ್ವಂಸಗೊಂಡಿವೆ. 

ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಓರ್ವ ಸಿಬ್ಬಂದಿ 'ಮೊದಲ ಅಂತಸ್ತಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ. ಆದರೆ ಆ ಪ್ರದೇಶದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮರದ ತುಂಡುಗಳಿಂದ ಬೆಂಕಿ ವೇಗವಾಗಿ ಹಬ್ಬಿಕೊಂಡಿದೆ' ಎಂದಿದ್ದಾರೆ. ಬೆಂಕಿಯ ತೀವ್ರತೆಗೆ ಆಸುಪಾಸಿನ ಕಟ್ಟಡಗಳೂ ಹಾನಿಯಾಗಿದೆ. ಒಟ್ಟಾರೆಯಾಗಿ ಸುಮಾರು 5 ಲಕ್ಷ ಮೌಲ್ಯದ ಸಾಮಾನು ಸುಟ್ಟು ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios