ಶೌಚಕ್ಕಾಗಿ ನಿತ್ಯ 2 ಕಿ.ಮೀ ಬಾಲಕಿಯರ ಕಾಲ್ನಡಿಗೆ

Hostel students walk 2km daily for toilet
Highlights

ಮಧ್ಯ ಪ್ರದೇಶದಲ್ಲಿ ಬರಗಾಲ ಯಾವ ಮಟ್ಟಿಗೆ ಬಂದು ತಲುಪಿದೆ ಎಂದರೆ ಕನಿಷ್ಠ ಪಕ್ಷ ಶೌಚಕ್ಕೂ ನೀರಿಲ್ಲದ ಸ್ಥಿತಿ ಎದುರಾಗಿದೆ. ದಾಮೋಹ್ ಜಿಲ್ಲೆಯ ಗ್ರಾಮದ ಹಾಸ್ಟೆಲ್ ಒಂದರಲ್ಲಿನ ಬಾಲಕಿಯರು ಇದರಿಂದ ಪಡಬಾರದ ಪಾಡು ಪಡುತ್ತಿದ್ದು, ಶೌಚಾಲಯ ಕ್ಕೆಂದು 2 ಕಿಲೋಮೀಟರ್ ಕಾಲ್ನಡಿಗೆ ಯಲ್ಲಿ ಸಂಚರಿಸಬೇಕಿದೆ.

ದಾಮೋಹ್ (ಮ.ಪ್ರ.): ಮಧ್ಯ ಪ್ರದೇಶದಲ್ಲಿ ಬರಗಾಲ ಯಾವ ಮಟ್ಟಿಗೆ ಬಂದು ತಲುಪಿದೆ ಎಂದರೆ ಕನಿಷ್ಠ ಪಕ್ಷ ಶೌಚಕ್ಕೂ ನೀರಿಲ್ಲದ ಸ್ಥಿತಿ ಎದುರಾಗಿದೆ. ದಾಮೋಹ್ ಜಿಲ್ಲೆಯ ಗ್ರಾಮದ ಹಾಸ್ಟೆಲ್ ಒಂದರಲ್ಲಿನ ಬಾಲಕಿಯರು ಇದರಿಂದ ಪಡಬಾರದ ಪಾಡು ಪಡುತ್ತಿದ್ದು, ಶೌಚಾಲಯ ಕ್ಕೆಂದು 2 ಕಿಲೋಮೀಟರ್ ಕಾಲ್ನಡಿಗೆ ಯಲ್ಲಿ ಸಂಚರಿಸಬೇಕಿದೆ. ಹೌದು. ಆಘಾತಕಾರಿ. 

ನಂಬಲನರ್ಹ ಎನ್ನಿಸಿದರೂ ಇದು ಸತ್ಯ. ನಿತ್ಯ ಈ ಹಾಸ್ಟೆಲ್‌ನಲ್ಲಿನ ಬಾಲಕಿಯರು ತಮ್ಮ ಶಾಲಾ ಶಿಕ್ಷಕಿ ಹಾಗೂ ಇತರ ಸಹಾಯಕಿಯರ ಜತೆ 2 ಕಿಲೋಮೀ ಟರ್‌ನಷ್ಟು ದೂರ ಬಕೆಟ್ ಹಿಡಿದು ಸಂಚರಿಸುತ್ತಾರೆ. ಹಾಸ್ಟೆಲ್ ಸುತ್ತಲಿನ 2 ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೀಗಾಗಿ ಹಾಸ್ಟೆಲ್‌ಗೆ ನೀರು ಪೂರೈಕೆ ಬಂದ್ ಆಗಿದೆ. ಕೊಳವೆಬಾವಿ ಬತ್ತಿದಾಗ ಟ್ಯಾಂಕರ್ ಮೂಲಕ ಈ ಹಿಂದೆ ನೀರು ಪೂರೈಕೆ ಆಗಿತ್ತು. 

ಆದರೆ ಈ ಸಲ  ಆಗಿಲ್ಲ ಎಂದು ಬಾಲಕಿಯರು ಅಳಲು ತೋಡಿಕೊಂಡಿದ್ದಾರೆ. ಈ ವಿಷಯ ಈಗ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಶೀಘ್ರ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ.

loader