ಚಿತ್ರದುರ್ಗ[ಜ.06]  ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಹೊಸದುರ್ಗ  ಪೊಲೀಸ್ ಠಾಣೆ ಹತ್ತಿರ ತಲೆಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನ ಮಾಡಿದ್ದಾರೆ.

ಬೆಂಕಿ ಹಚ್ಚಿಕೊಳ್ಳುವಷ್ಟರಲ್ಲಿ ತಡೆದ ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ. ಕಣ್ಣಿಗೆ ಸೀಮೆ ಎಣ್ಣೆ ಬಿದ್ದ ಪರಿಣಾಮ ಗೂಳಿಹಟ್ಟಿ ಶೇಖರ್  ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.  ಆಸ್ಪತ್ರೆ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ.

ನಿಗಮ ಮಂಡಳಿ:ಐದು ಕೈ ಶಾಸಕರಿಗಿಲ್ಲ 'ಕುಮಾರ' ಕೃಪೆ, ಮತ್ತೆ ಭುಗಿಲೆದ್ದ ಅಸಮಧಾನ

ಕಾರಣ ಏನು? ಸಾರ್ವಜನಿಕರಿಗೆ ಮರಳು ಸಿಗದಿರುವುದು ತೊಂದರೆ ಆಗಿದೆ ಎಂಬ ಕಾರಣಕ್ಕೆ ರಿಯಾಯಿತಿ ದರದಲ್ಲಿ ಮರಳು ಸಿಗುವಂತೆ ಆಗ್ರಹಿಸಿ ಶೇಖರ್ ಪ್ರತಿಭಟನೆಗೆ ಇಳಿದಿದ್ದರು. ಪರ್ಮಿಟ್ ಮರಳು ತಂದರು ಸಾರ್ವಜನಿಕರ ಮೇಲೆ ಪೊಲೀಸರು ಕೇಸು ದಾಖಲಿಸುತ್ತಿದ್ದಾರೆ ಎಂದು ಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದರು.