ಭಾರತೀಯ ಹುಡುಗಿಯರನ್ನು ಸರಬರಾಜು ಮಾಡುವುದಾಗಿ ಆಮಿಷವೊಡ್ಡಿ ವಿದೇಶಿಯರಿಗೆ ವಂಚನೆ ಮಾಡುತ್ತಿದ್ದ ಜಾಲವೊಂದು ಮಂಗಳೂರು ಪೊಲೀಸರ ಬಲೆಗೆ ಬಿದ್ದಿದೆ.

ಮಂಗಳೂರು(ಆ.07): ಭಾರತೀಯ ಹುಡುಗಿಯರನ್ನು ಸರಬರಾಜು ಮಾಡುವುದಾಗಿ ಆಮಿಷವೊಡ್ಡಿ ವಿದೇಶಿಯರಿಗೆ ವಂಚನೆ ಮಾಡುತ್ತಿದ್ದ ಜಾಲವೊಂದು ಮಂಗಳೂರು ಪೊಲೀಸರ ಬಲೆಗೆ ಬಿದ್ದಿದೆ.

ವಿದೇಶಿಗರ ವಾಟ್ಸಾಪ್ ನಂಬರ್'ಗೆ ಭಾರತೀಯ ಹುಡುಗಿಯರನ್ನು ಸರಬರಾಜು ಮಾಡುವುದಾಗಿ ಹೇಳಿ ತಮ್ಮದೇ ತಂಡದ ಯುವತಿಯ ಅರೆಬೆತ್ತಲೆ ವಿಡೀಯೋ ಕಾಲಿಂಗ್, ಫೋಟೋ ಕಳುಹಿಸಿ ವಿದೇಶಿಗರಿಂದ ತಮ್ಮ ಅಕೌಂಟ್'ಗೆ ಹಣ ಹಾಕಿಸಿಕೊಂಡು ನಂತರ ಮೊಬೈಲ್​​ ನಂಬರ್ ಬ್ಲಾಕ್ ಮಾಡಿ ವಂಚನೆ ಮಾಡುತ್ತಿದ್ದು, ಅಮೇರಿಕಾ, ದುಬೈ ಸೇರಿದಂತೆ ವಿವಿಧ ದೇಶದವರಿಗೆ ಹೀಗೆ ಸಂದೇಶ ಕಳುಹಿಸಿ ಮೋಸ ಮಾಡಿದ್ದಾರೆ.

ಇನ್ನು ಇದೆ ತಂಡದ ಕೀರ್ತನ್ ಎಂಬ ಯುವತಿ ಕಂಕನಾಡಿ ಬಳಿಯ ಲಾಡ್ಜ್ ಒಂದರಲ್ಲಿ ಕುಡಿದು ಜಗಳವಾಡಿಕೊಂಡಿದ್ದಾಳೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆ ವೇಳೆ ಕುಡಿದ ಮತ್ತಿನಲ್ಲಿದ್ದ ಯುವತಿ ತಾವು ಮಾಡುತ್ತಿದ್ದ ಹನಿಟ್ರಾಪ್ ವಿಚಾರ ಬಾಯ್ಬಿಟ್ಟಿದ್ದಾಳೆ.

ಸದ್ಯ ಕೀರ್ತನ್, ಕುಲ್ ದೀಪ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಉಳಿದ ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ.