ಬೆಂಗಳೂರಿನಲ್ಲಿ  ನೆಲೆಸಿರುವ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಲಕ್ಷ ಕಳೆದುಕೊಂಡಿದ್ದಾರೆ. 

ಬೆಂಗಳೂರು (ಮಾ. 29): ಬೆಂಗಳೂರಿನಲ್ಲಿ ನೆಲೆಸಿರುವ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಲಕ್ಷ ಕಳೆದುಕೊಂಡಿದ್ದಾರೆ. 

ಚಿಕ್ಕಮಗಳೂರಿನ ಕಲ್ಯಾಣ ನಗರ ನಿವಾಸಿ ಗೌರಿಶಂಕರ್​​’ಗೆ ಕಳೆದೊಂದು ವರ್ಷದಿಂದ ಫೇಸ್‍ಬುಕ್‍’ನಲ್ಲಿ ಮೈತ್ರಿ ಎಂಬುವವರ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ದೈಹಿಕ ಸಂಪರ್ಕ ಕೂಡ ನಡೆದಿತ್ತು. ಗೌರಿ ಶಂಕರ್​​’​​ನಿಂದ ಒಟ್ಟು 4 ಲಕ್ಷದ 85 ಸಾವಿರ ಹಣ ಕಿತ್ತಿರೋ ಮೈತ್ರಿ, ಸಿಂಗಲ್ ಸೆಟಲ್’​ಮೆಂಟ್’​​ಗಾಗಿ ಮತ್ತೆ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ. ಆಕೆಗೆ ಹಣ ಕೊಟ್ಟು ಸುಸ್ತಾಗಿರೋ ಗೌರಿಶಂಕರ್ ಪೊಲೀಸರ ಮೊರೆ ಹೋಗಿದ್ದಾನೆ.

ಬೆಂಗಳೂರಿನ ಪೀಣ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರೋ ಮೈತ್ರಿ ವಿರುದ್ಧ ಈ ಹಿಂದೆ ಪೀಣ್ಯ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈಗ ಮತ್ತೊಂದು ಪ್ರಕರಣ ದಾಖಲಾಗಿದೆ.