ಮರಣ ಹೊಂದಿದ ವ್ಯಕ್ತಿಯ ಗುರುತು ಹಿಡಿಯಲು ಆಧಾರ್ ಕಡ್ಡಾಯಗೊಳಿಸುವ ಕುರಿತು ಕೇಂದ್ರ ಗೃಹ ಇಲಾಖೆ ಸ್ಪಷ್ಟೀಕರಣ ನೀಡಿದೆ. ಮರಣ ಪ್ರಮಾಣ ಪತ್ರ ಪಡೆಯಲು ಆಧಾರ್ ಕಡ್ಡಾಯವಲ್ಲ ಆದರೆ ಅರ್ಜಿದಾರರು ಮೃತ ವ್ಯಕ್ತಿಯ ಬಳಿ ಆಧಾರ್ ಇಲ್ಲವೆಂದು ಪ್ರಮಾಣಪತ್ರ ನೀಡಬೇಕು ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (RGI) ಕಚೇರಿಯು ತಿಳಿಸಿದೆ.
ನವದೆಹಲಿ: ಮರಣ ಹೊಂದಿದ ವ್ಯಕ್ತಿಯ ಗುರುತು ಹಿಡಿಯಲು ಆಧಾರ್ ಕಡ್ಡಾಯಗೊಳಿಸುವ ಕುರಿತು ಕೇಂದ್ರ ಗೃಹ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಮರಣ ಪ್ರಮಾಣ ಪತ್ರ ಪಡೆಯಲು ಆಧಾರ್ ಕಡ್ಡಾಯವಲ್ಲ ಆದರೆ ಅರ್ಜಿದಾರರು ಮೃತ ವ್ಯಕ್ತಿಯ ಬಳಿ ಆಧಾರ್ ಇಲ್ಲವೆಂದು ಪ್ರಮಾಣಪತ್ರ ನೀಡಬೇಕು ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (RGI) ಕಚೇರಿಯು ತಿಳಿಸಿದೆ.
ಮೃತರ ಸಂಬಂಧಿಕರು/ಅರ್ಜಿದಾರರು ಆಧಾರ್ ಈ ಬಗ್ಗೆ ತಪ್ಪು ಮಾಹಿತಿ ನೀಡಿದಲ್ಲಿ ಆಧಾರ್ ಕಾನೂನು ಹಾಗೂ ಜನನ ಮತ್ತು ಮರಣ ನೋಂದಣಿ ಕಾಯ್ದೆ-1969ರ ನ್ವಯ ಶಿಕ್ಷಾರ್ಹ ಅಪರಾಧವಾಗುತ್ತದೆ, ಎಂದು ಆರ್’ಜಿಐ ಹೇಳಿದೆ.
ಇಂತಹ ಸಂದರ್ಭದಲ್ಲಿ ಅರ್ಜಿದಾರರ ಪತಿ/ಪತ್ನಿ ಅಥವಾ ಹೆತ್ತವರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಹೇಳಲಾಗಿದೆ.
ಆರ್’ಜಿಐ ಹಒರಡಿಸಿರುವ ಹೊಸ ನಿಯಮದ ಪ್ರಕಾರ ವ್ಯಕ್ತಿಯ ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ, ಮೃತ ವ್ಯಕ್ತಿಯನ್ನು ಗುರುತಿಸಲು ಅಕ್ಟೋಬರ್ 1ರಿಂದ ಆತನ/ಆಕೆಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಹೇಳಲಾಗಿದೆ.
