ಕರ್ನಾಟಕ ಬಂದ್‌: ಯಾವ್ಯಾವ ಜಿಲ್ಲೆಯ ಶಾಲಾ,ಕಾಲೇಜುಗಳಲ್ಲಿ ರಜಾ, ಎಲ್ಲಿ ಇಲ್ಲ, ಇಲ್ಲದೆ ಲಿಸ್ಟ್

First Published 24, Jan 2018, 9:24 PM IST
Holiday List for Karnataka Bundh
Highlights

ಕೆಲವನ್ನು ಜಿಲ್ಲಾಧಿಕಾರಿ ವಿವೇಚನೆಗೆ ನೀಡಲಾಗಿದ್ದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಿಸುವುದನ್ನು ಜಿಲ್ಲಾಡಳಿತದ ವಿವೇಚನೆಗೆ ಬಿಡಲಾಗಿದೆ.

ಬೆಂಗಳೂರು(.24): ನಾಳೆ ಕರ್ನಾಟಕ ಬಂದ್ ಕೆಲವು ಜಿಲ್ಲೆಗಳಲ್ಲಿ ಮಾತ್ರ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಿಸಿದ್ದು, ಕೆಲವನ್ನು ಜಿಲ್ಲಾಧಿಕಾರಿ ವಿವೇಚನೆಗೆ ನೀಡಲಾಗಿದ್ದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಿಸುವುದನ್ನು ಜಿಲ್ಲಾಡಳಿತದ ವಿವೇಚನೆಗೆ ಬಿಡಲಾಗಿದೆ.

ರಜೆ ನೀಡಿರುವ ಜಿಲ್ಲೆಗಳು
ಬೆಂಗಳೂರು ನಗರ, ಕೋಲಾರ, ಮಂಡ್ಯ, ರಾಮನಗರದಲ್ಲಿ ರಜೆ, ಧಾರವಾಡ ಜಿಲ್ಲೆಯ ಎಲ್ಲ ಸರಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ, ಬೆಳಗಾವಿಯ ಕೆಲವು ತಾಲೂಕುಗಳಲ್ಲಿ ಮಾತ್ರ ರಜೆ ಘೋಷಿಸಲಾಗಿದೆ.

ರಜೆ ನೀಡಿರದ ಜಿಲ್ಲೆಗಳು

ಮೈಸೂರು, ಹಾಸನ, ಬಾಗಲಕೋಟ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಯಾದಗಿರಿ, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ರಜೆಯಿಲ್ಲ.

ಉಳಿದ ಜಿಲ್ಲೆಗಳಲ್ಲಿ ರಜೆ ಘೋಷಿಸುವುದಕ್ಕೆ ಜಿಲ್ಲಾಡಳಿತದ ವಿವೇಚನೆಗೆ ಬಿಡಲಾಗಿದೆ.

loader