ನಾರಾಯಣಪುರ ಡ್ಯಾಂ ಐತಿಹಾಸಿಕ ದಾಖಲೆ!

ನಾರಾಯಣಪುರ ಡ್ಯಾಂ ಐತಿಹಾಸಿಕ ದಾಖಲೆ| ಇದೇ ಮೊದಲ ಬಾರಿ 6.5 ಲಕ್ಷ ಕ್ಯುಸೆಕ್‌ ಬಿಡುಗಡೆ| 10 ದಿನದಲ್ಲಿ 325 ಟಿಎಂಸಿ ರಿಲೀಸ್‌

Historic Record 6 5 Lakh Cusec Water released From Narayanapura Dam Of Yadgir

ಆನಂದ್‌ ಎಂ.ಸೌದಿ

ಯಾದಗಿರಿ[ಆ.11]: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಆಲಮಟ್ಟಿಜಲಾಶಯದಿಂದ 5 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ನಾರಾಯಣಪುರ ಜಲಾಶಯದ ಒಳ ಹರಿವಿನ ಪ್ರಮಾಣ 6.25 ಲಕ್ಷ ಕ್ಯುಸೆಕ್‌ಗೆ ಏರಿದೆ. ಇಷ್ಟೇ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಹೀಗಾಗಿ ಕಳೆದ 10 ದಿನದಲ್ಲಿ 325 ಟಿಎಂಸಿ ನೀರು ಸಮುದ್ರ ಸೇರಿದೆ!

2009ರ ಮಳೆ ಪ್ರವಾಹ ಸಂದರ್ಭದಲ್ಲಿ, ಸೆಪ್ಟೆಂಬರ್‌ 30ರಿಂದ ಅಕ್ಟೋಬರ್‌ 3 ರವರೆಗಿನ ಅವಧಿಯಲ್ಲಿ 5 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿತ್ತು. ಈಗ, ಇದೇ ಮೊದಲ ಬಾರಿಗೆ ಅನ್ನುವಂತೆ ಆಲಮಟ್ಟಿಹಾಗೂ ಮಲಪ್ರಭೆಯಿಂದ 6.50 ಲಕ್ಷ ಕ್ಯುಸೆಕ್‌ ನೀರು ಒಳಹರಿವು ಬಂದಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಶನಿವಾರ ಸಂಜೆ 27 ಗೇಟುಗಳ ಮೂಲಕ (6.25 ಲಕ್ಷ ಕ್ಯುಸೆಕ್‌) ಕೃಷ್ಣೆಗೆ ಹರಿಸಲಾಗಿದೆ.

ಜಲಾಶಯದ ಅಧಿಕಾರಿಗಳ ಮೂಲಗಳ ಪ್ರಕಾರ, ಜುಲೈ 30 ರಿಂದ ಆ.10 ರವರೆಗೆ (ಸಂಜೆ 6 ಗಂಟೆವರೆಗೆ), ಈ ಹತ್ತು ದಿನಗಳ ಅವಧಿಯಲ್ಲಿ ಒಟ್ಟು 325 ಟಿಎಂಸಿ ನೀರು ಹರಿದು ಹೋಗಿದೆ. ಭಾನುವಾರದವರೆಗೆ ಇನ್ನೂ 20-25 ಟಿಎಂಸಿ ನೀರು ಹೋಗಬಹುದು.

ಪಾಯಿಂಟ್‌

-ಬಸವ ಸಾಗರ ಜಲಾಶಯದ ಉದ್ದ : 10.637 ಕಿ.ಮೀ.

-ಜಲಾಶಯದ ಎತ್ತರ : 492.5 ಮೀ. (29 ಗೇಟುಗಳು)

-ಸಂಗ್ರಹ ಸಾಮರ್ಥ್ಯ : 37.60 ಟಿ.ಎಂ.ಸಿ.

-ನೀರಾವರಿ ಪ್ರದೇಶ : 10 ಲಕ್ಷ ಎಕರೆ ಪ್ರದೇಶದಲ್ಲಿ ಕೃಷಿಗೆ ಸಹಕಾರಿ

-1982ರಲ್ಲಿ ಸೇತುವೆ ಲೋಕಾರ್ಪಣೆ: 41.40 ಕೋಟಿ ರು. ಗಳ ವೆಚ್ಚದಲ್ಲಿ ನಿರ್ಮಾಣ

Latest Videos
Follow Us:
Download App:
  • android
  • ios