Asianet Suvarna News Asianet Suvarna News

ಹಿಂದು, ಮುಸ್ಲಿಮರು ಹೆಚ್ಚಿನ ಪ್ರಮಾಣದಲ್ಲಿರುವ ಉದ್ಯೋಗ ಕ್ಷೇತ್ರಗಳ್ಯಾವು..?

 ದೇಶದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಉದ್ಯೋಗ ಕಂಡುಕೊಂಡಿದ್ದರೆ, ಕೈಗಾರಿಕಾ ಕ್ಷೇತ್ರದಲ್ಲಿ ಮುಸ್ಲಿಮರು ಅಧಿಕ ಪ್ರಮಾಣದಲ್ಲಿ ನೌಕರಿಯಲ್ಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Hindus Take Up Farming While Muslims Bank on Industrial Jobs

ನವದೆಹಲಿ: ದೇಶದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಉದ್ಯೋಗ ಕಂಡುಕೊಂಡಿದ್ದರೆ, ಕೈಗಾರಿಕಾ ಕ್ಷೇತ್ರದಲ್ಲಿ ಮುಸ್ಲಿಮರು ಅಧಿಕ ಪ್ರಮಾಣದಲ್ಲಿ ನೌಕರಿಯಲ್ಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

2011ರ ಜನಗಣತಿ ವರದಿಯನ್ನು ವಿಶ್ಲೇಷಣೆಗೊಳಪಡಿಸಿ ವರದಿ ತಯಾರಿಸಿರುವ ಟೀವಿ ವಾಹಿನಿಯೊಂದು, ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರ ಪೈಕಿ ಶೇ.45.40ರಷ್ಟುಹಿಂದುಗಳು ಇದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಮುಸ್ಲಿಮರ ಸಂಖ್ಯೆ ಶೇ.60ರಷ್ಟಿದೆ ಎಂದು ತಿಳಿಸಿದೆ.

ಹಿಂದುಗಳಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಅನಕ್ಷರತೆ ಹೆಚ್ಚು. ಏಳು ವರ್ಷ ಮೇಲ್ಪಟ್ಟಶೇ.42.72ರಷ್ಟುಮುಸ್ಲಿಮರು ನಿರಕ್ಷರರಾಗಿದ್ದರೆ, ಅಂತಹ ಹಿಂದುಗಳ ಸಂಖ್ಯೆ ಶೇ.36.60ರಷ್ಟಿದೆ. ಆದರೆ ಅನಕ್ಷರತೆಗೂ ಅವರು ಮಾಡುತ್ತಿರುವ ಉದ್ಯೋಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿ ಹೇಳಿದೆ.

ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಮುಸ್ಲಿಮ್‌ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಹೆಚ್ಚಿನ ಮುಸ್ಲಿಮರು ಕುಶಲಕರ್ಮಿಗಳಾಗಿದ್ದಾರೆ. ನೇಕಾರಿಕೆ, ಕುಂಬಾರಿಕೆ, ಕಬ್ಬಿಣ, ಮರ ಕೆಲಸ, ಕೈಗಮಗ್ಗ ಮುಂತಾದ ಉತ್ಪಾದನಾ ವಲಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಸ್ಲಿಮರಲ್ಲಿ ಹೆಚ್ಚಿನವರು ಕೃಷಿಕರಲ್ಲ ಎಂದು ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಪಿ.ಎಸ್‌. ಕೃಷ್ಣನ್‌ ಅವರು ತಿಳಿಸಿದ್ದಾರೆ.

Follow Us:
Download App:
  • android
  • ios