ಚಂದಾದಾರದಲ್ಲಿ  ಈದ್  ಮಿಲಾದ್ ಆಚರಣೆ ಸಂಬಂಧ ಹಿಂದು ಮುಸ್ಲಿಂ ನಡುವೆ ಹುಟ್ಟಿಕೊಂಡ ವಿವಾದದಿಂದ ಹೊನ್ನಾವರ ತಾಲೂಕಿನ  ಚಂದಾವರದಲ್ಲಿ ಪರಸ್ಥಿತಿ ಉದ್ವಿಗ್ನಗೊಂಡಿದೆ.

ಉತ್ತರ ಕನ್ನಡ (ಡಿ.01): ಚಂದಾದಾರದಲ್ಲಿ ಈದ್ ಮಿಲಾದ್ ಆಚರಣೆ ಸಂಬಂಧ ಹಿಂದು ಮುಸ್ಲಿಂ ನಡುವೆ ಹುಟ್ಟಿಕೊಂಡ ವಿವಾದದಿಂದ ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಪರಸ್ಥಿತಿ ಉದ್ವಿಗ್ನಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ಗುಂಪುಗಳ ನಡುವೆ ಮಾರಾಮಾರಿ, ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಮಲಾಕರ್ ಎಂಬುವರ ತಲೆಗೆ ಕಲ್ಲು ತೂರಾಟದಿಂದ ಗಂಭೀರ ಗಾಯವಾಗಿದೆ.

ಕಲ್ಲು ತೂರಾಟದಿಂದ ಬಿಜೆಪಿ ಮುಖಂಡ ಸೂರಜ್ ನಾಯ್ಕ್ ಕಾರು ಗಾಜು ಜಖಂಗೊಂಡಿದೆ. ಚಂದಾವರದ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮುಸ್ಲಿಂ ಆಚರಣೆಗೆ ಚಂದಾವರದಲ್ಲಿ ಮಸೀದಿ ಗುಮ್ಮಟ ಸ್ಥಾಪನೆಗೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು, ಚಂದಾವರ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಶಸ್ತ್ರ ಮೀಸಲುಪಡೆ ವಜ್ರ ವಾಹನ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿಗಳ ಕಣ್ಗಾವಲು ಇಡಲಾಗಿದೆ. ಘಟನಾ ಸ್ಥಳದಲ್ಲಿ ಬಿ.ಜೆ.ಪಿ ಮುಖಂಡರು, ಕಾರ್ಯಕರ್ತರು, ಹಿಂದೂಪರ ಸಂಘಟನೆಗಳು ಭಾಗಿಯಾಗಿವೆ.

ಪೊಲೀಸ್ ಹಿರಿಯ ಅಧಿಕಾರಿಗಳು, ತಾಲೂಕಾಡಳಿತಾಧಿಕಾರಿಗಳು ಎರಡುಕೋಮುಗಳ ಪ್ರಮುರೊಂದಿಗೆ ಸಂಧಾನ ಸಭೆ ನಡೆದಿದೆ. ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡ ಸೂರಜ್ ನಾಯ್ಕ್'ರನ್ನು ಬಂಧಿಸಿದ್ದು 25ಕ್ಕೂ ಹೆಚ್ಚು ಹಿಂದು ಪರ ಸಂಘಟನೆಯ ಮುಖಂಡರನ್ನು ಬಂಧಿಸಲಾಗಿದೆ.