Asianet Suvarna News Asianet Suvarna News

ಮೆಜೆಸ್ಟಿಕ್, ಚಿಕ್ಕಪೇಟೆ ಮೆಟ್ರೊ ಬೋರ್ಡ್'ಗಳಿಂದ ಹಿಂದಿಯನ್ನು ಅಳಿಸಿ ಹಾಕಿದ ಬಿಎಂಆರ್'ಸಿಎಲ್

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಆಂದೋಲನ ನಡೆದ ಬಳಿಕ ಬಿಎಂಆರ್’ಸಿಲ್ ಮೆಜೆಸ್ಟಿಕ್, ಚಿಕ್ಕಪೇಟೆಯಲ್ಲಿ ಮೇಟ್ರೋ ಬೋರ್ಡ್’ಗಳಲ್ಲಿ ಹಿಂದಿಯನ್ನು ಅಳಿಸಿ ಹಾಕಿದೆ.

Hindi signages at Bengaluru metro stations covered after massive online Hindi Beda protest

ನವದೆಹಲಿ (ಜು.03): ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಆಂದೋಲನ ನಡೆದ ಬಳಿಕ ಬಿಎಂಆರ್’ಸಿಲ್ ಮೆಜೆಸ್ಟಿಕ್, ಚಿಕ್ಕಪೇಟೆಯಲ್ಲಿ ಮೇಟ್ರೋ ಬೋರ್ಡ್’ಗಳಲ್ಲಿ ಹಿಂದಿಯನ್ನು ಅಳಿಸಿ ಹಾಕಿದೆ.

Hindi signages at Bengaluru metro stations covered after massive online Hindi Beda protest

ಮೆಟ್ರೋ ಬೋರ್ಡ್’ಗಳಲ್ಲಿ ಹಿಂದಿಯನ್ನು ಎರಡನೇ ಭಾಷೆಯಾಗಿ ಮಾಡಿರುವುದಕ್ಕೆ ಕೇಂದ್ರ ಸರ್ಕಾರವು ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ನಾಗರೀಕರು ಪ್ರತಿಭಟನೆ ಮಾಡಿದ್ದರು. ಟ್ವಿಟರ್’ನಲ್ಲಿ # #NammaMetroHindiBeda ಟ್ರೆಂಡ್ ಶುರುವಾಯ್ತು. ಬಳಿಕ ಫೇಸ್’ಬುಕ್’ ಟ್ವಿಟರ್’ನಲ್ಲಿ ಭಾರೀ ಪ್ರಮಾಣದ ಆಂದೋಲನವೇ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನಾಕಾರರ ಜೊತೆ ಮಾತನಾಡಿ, ಬೆಂಗಳೂರು ಮೆಟ್ರೋ ಕೇಂದ್ರ ಸರ್ಕಾರದ ಯೋಜನೆಯಲ್ಲ. ಹಾಗಾಗಿ ಬೋರ್ಡ್’ಗಳಲ್ಲಿ ಹಿಂದಿ ಬಳಕೆ ಬೇಡ ಎಂದಿದ್ದಾರೆ.

Hindi signages at Bengaluru metro stations covered after massive online Hindi Beda protest

ಕನ್ನಡ ಪರ ಸಂಘಟನೆಗಳು ಮೆಜೆಸ್ಟಿಕ್ ಮತ್ತು ಚಿಕ್ಕಪೇಟೆ ಮೆಟ್ರೋ ಸ್ಟೇಷನ್’ಗೆ ನುಗ್ಗಿ ಬೋರ್ಡ್’ಗಳಿಗೆ ಕಪ್ಪುಮಸಿ ಬಳೆಯಲು ಪ್ಲಾನ್ ಮಾಡಿದ್ದರು. ಮುಂಜಾಗ್ರತಾ ಕ್ರಮವಾಗಿ ಉಪ್ಪಾರ ಪೇಟೆ ಪೊಲೀಸರು ಬೋರ್ಡ್’ನಿಂದ ಹೊಂದಿಯನ್ನು ಅಳಿಸಿ ಹಾಕಿಸಿದ್ದಾರೆ. ಜೊತೆಗೆ ಎರಡೂ ಸ್ಟೇಷನ್’ಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

Follow Us:
Download App:
  • android
  • ios